ಎಮ್ಮಿಗನೂರಿನ ಹಂಪಿಸಾವಿರದೇವರಮಠದಲ್ಲಿ ಶ್ರೀ ವಾಮದೇವ ಶಿವಾಚಾರ್ಯರ ಗುರುವಂದನೆ ಕಾರ್ಯಕ್ರಮ ನಡೆಯಿತು.  
ಬಳ್ಳಾರಿ

ಕಾಯಕ ತತ್ವದಿಂದ ದೇಶದ ಅಭಿವೃದ್ಧಿ ಸಾಧ್ಯ

ಕಂಪ್ಲಿ: ಕಾಯಕ್ಕೆ ಸಾವಿದ್ದು ಕಾಯಕ ತತ್ವಕ್ಕೆ ಸಾವಿಲ್ಲ. ಪ್ರತಿಯೊಬ್ಬರೂ ಕಾಯದೊಳಗಿನ ಕಾಯಕ ತತ್ವಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದು ಎಮ್ಮಿಗನೂರಿನ ಶ್ರೀ ವಾಮದೇವ ಶಿವಾಚಾರ್ಯರು ಹೇಳಿದರು.
ಎಮ್ಮಿಗನೂರಿನ ಹಂಪಿಸಾವಿರದೇವರ ಮಠದಲ್ಲಿ ಶ್ರೀ ವಾಮದೇವ ಶಿವಾಚಾರ್ಯರ ಗುರುವಂದನಾ ಮತ್ತು ಜನ್ಮದಿನಾಚರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಾಯಕವನ್ನೇ ಕೈಲಾಸ ಮಾಡಿಕೊಂಡಲ್ಲಿ ಜನ್ಮ ಸಾರ್ಥಕವಾಗುತ್ತದೆ. ದೇಶದ ಅಭಿವೃದ್ಧಿಗೆ ಕಾಯಕ ತತ್ವವೇ ಆಧಾರವಾಗಿದೆ ಎಂದರು.
ಹರಗಿನದೋಣಿಯ ಸಿದ್ದಲಿಂಗ ಶಿವಾಚಾರ್ಯರು, ಮಸ್ಕಿಯ ವರರುದ್ರಮುನಿ ಶಿವಾಚಾರ್ಯರು, ಬಳ್ಳಾರಿ ಕಲ್ಯಾಣಸ್ವಾಮೀಜಿ, ಎಚ್.ವೀರಾಪುರದ ಜಡೇಶ ತಾತ, ಜವುಕಿನ ಕೊಟ್ರಯ್ಯತಾತ, ಕುರೇಕುಪ್ಪದ ಶರಣಬಸವ ಶರಣರು, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಬಿಚ್ಚಗಲ್ ಪಂಚಾಕ್ಷರಪ್ಪ, ಪ್ರಮುಖರಾದ ಕಲ್ಯಾಣಚೌಕಿಮಠದ ಬಸವರಾಜಶಾಸ್ತ್ರಿ, ಜಗನ್ನಾಥ, ಬಿ.ಸದಾಶಿವಪ್ಪ, ಮಹೇಶಗೌಡ್ರು, ಪಿಗ್ಮಿ ಶರಣಬಸವನಗೌಡ, ಯಳ್ಳಾರ್ಥಿ ರಾಘವೇಂದ್ರರೆಡ್ಡಿ, ಬಜಾರ ಬಸವರಾಜ, ಘನಮಠಯ್ಯ, ಎಸ್.ರಾಮಪ್ಪ ಇದ್ದರು.