Animals 
ಬಳ್ಳಾರಿ

ಇಲಾಖೆಯಿಂದ ಪ್ರಾಣಿದಯಾ ಸಂಘ ರಚನೆಯಾಗಲಿ Animal Welfare Association

ಪ್ರಮುಖ ಮುಖ್ಯಾಂಶಗಳು

  • ಕೊಟ್ಟೂರಿನಲ್ಲಿ ಕೇಳಿಬರುತ್ತಿದೆ ಆಗ್ರಹ ಪಶುಸಂಗೋಪನಾ ಇಲಾಖೆ ಕ್ರಮಕ್ಕೆ ಮುಂದಾಗಲಿ
  • ಕಂಪ್ಲಿ ಪಟ್ಟಣ ತಾಲೂಕು ಕೇಂದ್ರವಾಗಿ ಎಂಟು ವರ್ಷ
  • ಸಾಕು ಪ್ರಾಣಿ ಸೇರಿ ಎಲ್ಲ ಪ್ರಾಣಿಗಳ ಹಿತ ಸಂರಕ್ಷಣಿ
ಕಂಪ್ಲಿ: ಪಟ್ಟಣ ತಾಲೂಕು ಕೇಂದ್ರವಾಗಿ ಎಂಟು ವರ್ಷಗಳಾಗಿದ್ದು, ಪಶು ಸಂಗೋಪನಾ ಇಲಾಖೆಯಿಂದ ಪ್ರಾಣಿದಯಾ ಸಂಘ ರಚಿಸಬೇಕೆಂದು ಪ್ರಾಣಿ ದಯಾಪ್ರಿಯರು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ 9,520 ದನಗಳು, 7,531 ಎಮ್ಮೆ, 60,990 ಕುರಿ, 14,966 ಆಡು, 443 ಹಂದಿ, 1,073 ಸಾಕುನಾಯಿ, ಬೀದಿ ನಾಯಿಗಳ ಪೈಕಿ 589 ಗಂಡು, 674 ಹೆಣ್ಣು ನಾಯಿಗಳು, 30,224 ತತ್ತಿ ಇಡುವ ಕೋಳಿ, 87,413 ಮಾಂಸದ ಕೋಳಿಗಳು, 125 ಬಿಡಾಡಿ ಗೂಳಿ, 196 ಬಿಡಾಡಿ ಆಕಳುಗಳಿವೆ. ಪಟ್ಟಣದ 23ವಾರ್ಡ್ ವ್ಯಾಪ್ತಿಯಲ್ಲಿ 142 ಗಂಡು ಹಾಗೂ 188 ಹೆಣ್ಣು ನಾಯಿಗಳಿವೆ.
ಸಾಕು ಪ್ರಾಣಿ ಸೇರಿದಂತೆ ಎಲ್ಲ ಪ್ರಾಣಿಗಳ ಹಿತ ಸಂರಕ್ಷಿಸಲು ಪ್ರಾಣಿದಯಾ ಸಂಘ ಪ್ರಮುಖ ಪಾತ್ರ ವಹಿಸಲಿದೆ. ಪ್ರಾಣಿ, ಪಕ್ಷಿಗಳ ಕುರಿತು ನಿಗಾವಹಿಸಲು, ಪ್ರಾಣಿಗಳ ಹಿಂಸೆ ತಡೆಯಲು ಪ್ರಾಣಿದಯಾ ಸಂಘದ ರಚನೆಯ ಅಗತ್ಯವಿದೆ. ಸದ್ಯ ಪುರಸಭೆಯಿಂದ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗಾಗಿ ಬೀದಿ ನಾಯಿಗಳನ್ನು ಗುರುತಿಸುವ ಕಾರ್ಯ ನಡೆದಿದೆ. ಬೀದಿ ನಾಯಿಗಳ ಜೀವ ರಕ್ಷಣೆ ಅಗತ್ಯವಿದೆ. ಪಶು ಸಂಗೋಪನಾ ಇಲಾಖೆ ತ್ವರಿತವಾಗಿ ಪ್ರಾಣಿದಯಾ ಸಂಘ ರಚನೆಗೆ ಮುಂದಾಗಲಿ ಎಂದು ಜಯಪ್ರಕಾಶ ಚೌದ್ರಿ, ಬಿ.ಲಕ್ಷ್ಮಣ, ಓಬಳೇಶ್ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಕೋತಿ, ನಾಯಿಗಳ ಸ್ಥಿತಿ ಚಿಂತಾಜನಕವಾಗಿದೆ. ಸರಿಯಾಗಿ ಆಹಾರ ದೊರಕುತ್ತಿಲ್ಲ. ಇದರಿಂದ ಆಕ್ರಮಣಕಾರಿ ಮನೋಭಾವ ತೋರುತ್ತಿವೆ. ಪ್ರಾಣಿಗಳ ಹಿತರಕ್ಷಣೆಗೆ ಪ್ರಾಣಿದಯಾ ಸಂಘ ರಚಿಸಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು.

ಪಟ್ಟಣದಲ್ಲಿ ತಾಲೂಕು ಮಟ್ಟದ ಪ್ರಾಣಿದಯಾ ಸಂಘವನ್ನು ಪಶು ಸಂಗೋಪನಾ ಇಲಾಖೆ ಮೂಲಕ ರಚಿಸಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕ್ರಮವಹಿಸಲಾಗುವುದು.

ಕಂಪ್ಲಿಯಲ್ಲಿ ತಾಲೂಕು ಮಟ್ಟದ ಪ್ರಾಣಿದಯಾ ಸಂಘ ರಚಿಸುವ ಅಗತ್ಯವಿದೆ. ಇದರಿಂದ ಪ್ರಾಣಿಗಳ ಹಿತಾಸಕ್ತಿ ಕಾಪಾಡಲು, ಅವುಗಳ ಯೋಗ ಕ್ಷೇಮ ನೋಡಿಕೊಳ್ಳಲು, ಅಪಘಾತಕ್ಕೀಡಾದಾಗ ಅಗತ್ಯ ಚಿಕಿತ್ಸೆ ಒದಗಿಸಲು ಸಾಧ್ಯವಾಗಲಿದೆ.