ಹಗರಿಬೊಮ್ಮನಹಳ್ಳಿ ರಾಮನಗರದ ಶ್ರೀ ವೆಂಕಟೇಶ್ವರ ಸ್ವಾಮಿ ರಥದ ಚಕ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪ್ರಮುಖರಾದ ಗಂಗಾವತಿ ವಿಜಯಕುಮಾರ, ವಸಂತ ಮಾಲವಿ, ಗಂಗಾವತಿ ಕಲ್ಪನಾ ವಿಜಯ್ ಕುಮಾರ್, ಚಂದ್ರರೇಖಾ ವಸಂತ ಮಾಲವಿ, ಎನ್.ಬಿ.ವಾಗೀಶ್ ಮತ್ತಿತರರು ಇದ್ದರು. 
ಬಳ್ಳಾರಿ

ರಾಮನಗರದ ವೆಂಕಟೇಶ್ವರ ಸ್ವಾಮಿ ರಥೋತ್ಸವ ನಾಡಿದ್ದು

ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದ ಆರಾಧ್ಯ ದೈವ ಶ್ರೀ ವೆಂಕಟೇಶ್ವರ ಸ್ವಾಮಿ ತೇರಿಗೆ ಪೂಜೆ ಪುನಸ್ಕಾರಗಳೊಂದಿಗೆ ಚಕ್ರ ಜೋಡಿಸಲಾಯಿತು.
ರಥೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಗಂಗಾವತಿ ವಿಜಯಕುಮಾರ ಮಾತನಾಡಿ, ಜ.23ರಂದು ಸಂಜೆ ರಥೋತ್ಸವ ವಿಜೃಂಭಣೆಯಿಂದ ರಥೋತ್ಸವ ನಡೆಯಲಿದೆ.
ರಥದ ಒಂದು ಚಕ್ರ (ಗಾಲಿ) ಹಳೆಯದಾಗಿದ್ದು, ಕಳೆದ ವರ್ಷವೇ ಬದಲಾವಣೆಯಾಗಬೇಕಿತ್ತು. ಈ ವರ್ಷ ಬದಲಾವಣೆ ಮಾಡಲಾಗಿದೆ ಎಂದರು. ಧರ್ಮಕರ್ತ ನಾಣ್ಯಪುರ ಕೃಷ್ಣಮೂರ್ತಿ, ಪೂರೋಹಿತರಾದ ಬದ್ರಿನಾಥ, ಪ್ರಮುಖರಾದ ಗಂಗಾವತಿ ಕಲ್ಪನಾ ವಿಜಯ್ ಕುಮಾರ್, ಚಂದ್ರರೇಖಾ ವಸಂತ ಮಾಲವಿ, ವಸಂತ ಮಾಲವಿ, ಎನ್.ಬಿ.ವಾಗೀಶ್, ಬಿ.ವೆಂಕಟೇಶ್, ಪಿ.ವಿ.ಪ್ರಸಾದ್, ಗಂಗಾವತಿ ವಿಜೀತ್, ಬಂಗಾರಿ ಗಾಳಿರಾಜ್, ಬಾರಿಕರ ನಿಂಗಪ್ಪ, ಸರ್ದಾರ್ ಯಮನೂರಪ್ಪ, ಕೊಟ್ರಯ್ಯ ಸ್ವಾಮಿ, ದಾಸಪ್ಪ, ಬಾರಿಕಾರ ಸುರೇಶ್, ಲಾಡಕನಬಾವಿ ಹುಲುಗಪ್ಪ, ಸಣ್ಣ ತಾಯಪ್ಪ, ನಂದಿಹಳ್ಳಿ ಪ್ರಕಾಶ್, ಮಂಜುನಾಥ, ಗಾಲಿ ತಯಾರಕ ಬಡಿಗೇರ್ ತಿಪ್ಪೇಸ್ವಾಮಿ, ಭೋಜರಾಜ್ ವಿಶ್ವಕರ್ಮ, ಉಪ್ಪಾರ್ ವೆಂಕಪ್ಪ, ಉಪ್ಪಾರ್ ಶೇಖರಪ್ಪ, ಉಪ್ಪಾರ್ ಕೊಟ್ರೇಶ್, ದೈವಸ್ಥರು ಇದ್ದರು.