ಬಿ.ಶ್ರೀರಾಮುಲು  
ಬಳ್ಳಾರಿ

ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ

ಪ್ರಮುಖ ಮುಖ್ಯಾಂಶಗಳು

  • ಅನಾವರಣ
  • ಪೊಲೀಸರು
  • ಪ್ರಕರಣ
ಬಳ್ಳಾರಿ : ವಾಲ್ಮೀಕಿ ಪುತ್ಥಳಿ ಅನಾವರಣ ಗಲಾಟೆಯಲ್ಲಿ ಓರ್ವ ಮೃತಪಟ್ಟ ಪ್ರಕರಣವನ್ನು ನಿಪಕ್ಷಪಾತ ತನಿಖೆಗಾಗಿ ಹೈಕೋರ್ಟ್ ನ್ಯಾಯಾಧೀಶ ಅಥವಾ ಸಿಬಿಐ ವಹಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪೊಲೀಸರು ಹಾರಿಸಿದ ಗುಂಡಿನಿಂದ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿಲ್ಲ. ಕಾಂಗ್ರೆಸ್‌ನವರೇ ಇರಿಸಿಕೊಂಡಿರುವ ಖಾಸಗಿ ಅಂಗರಕ್ಷಕರ ಹಾರಿಸಿದ ಗುಂಡೇಟಿನಿಂದ ಸಾವು ಸಂಭವಿಸಿದೆ. ವಾಸ್ತವ ಹೊರಬರಬೇಕಾದರೆ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದರು.
ನಗರದಲ್ಲಿ ನಡೆದ ಗಲಾಟೆ ಆಕಸ್ಮಿಕವಲ್ಲ. ಇದೊಂದು ಪೂರ್ವನಿಯೋಜಿತ ಪ್ರಕರಣವಾಗಿದೆ. ಶಾಸಕ ನಾರಾ ಭರತರೆಡ್ಡಿ ಬಿಹಾರ ಮತ್ತು ಯುಪಿ ಕಡೆಯಿಂದ ವ್ಯಕ್ತಿಗಳಿಂದ ಕರೆತಂದು ಈ ಕೃತ್ಯ ನಡೆಸಿದ್ದಾರೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರನ್ನು ಹತ್ಯೆ ಮಾಡಲು ದೊಡ್ಡ ಸಂಚು ರೂಪಿಸಲಾಗಿದೆ. ದುರುದ್ದೇಶದಿಂದಲೇ ಅವರ ಮನೆ ಮೇಲೆ ದಾಳಿಗೆ ಪ್ರಯತ್ನಿಸಲಾಗಿದೆ. ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ ಎಂದು ದೂರಿದರು.
ಈಗಾಗಲೇ ಚಿತ್ರದುರ್ಗದ ಎಸ್ಪಿ ಯೇ ಖಾಸಗಿ ಅಂಗರಕ್ಷಕನಿಂದ ಫೈರಿಂಗ್ ಆಗಿ ಸಾವು ಸಂಭವಿಸಿದೆ ಎಂಬುದಾಗಿ ತಿಳಿಸಿದ್ದು, ಪ್ರಕರಣದ ಗಂಭೀರತೆ ತೋರಿಸುತ್ತದೆ. ಜನಾರ್ದನ ರೆಡ್ಡಿಯವರಿಂದಲೇ ಕಾಂಗ್ರೆಸ್ ಕಾರ್ಯಕರ್ತನಿಂದ ಸಾವು ಸಂಭವಿಸಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದರು.