ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ವೀರಶೈವ ಸಮಾಜದಿಂದ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಿತು. ತಾಪಂ ಮಾಜಿ ಸದಸ್ಯ ಜಿ.ಶಿವಪ್ರಸಾದ್ ಗೌಡ, ಕರವೇ ಗ್ರಾಮ ಘಟಕ ಅಧ್ಯಕ್ಷ ಜೆ.ಶಿವಕುಮಾರ್, ಪ್ರಮುಖರಾದ ಪೇಂಟ್ ತಿಪ್ಪೇಸ್ವಾಮಿ, ಮಠದ ಶಿವಕುಮಾರ್ ಸ್ವಾಮಿ, ಎರ‌್ರಿಸ್ವಾಮಿ, ಪೂಜಾರ್ ಸಿದ್ದಣ್ಣ, ಎಲೆ ಕರಿಬಸಜ್ಜಯ್ಯ ಇದ್ದರು. 
ಬಳ್ಳಾರಿ

ಸಾಮಾಜಿಕ ಕ್ರಾಂತಿಯಿಂದ ಸಮಾನತೆ ಮಂತ್ರ ಬೋಧನೆ

ಪ್ರಮುಖ ಮುಖ್ಯಾಂಶಗಳು

  • ಬಸವೇಶ್ವರ ಜಯಂತಿ

ಸಾಮಾಜಿಕ ಕ್ರಾಂತಿಯಿಂದ ಸಮಾನತೆ ಮಂತ್ರ ಬೋಧನೆ

ಕೂಡ್ಲಿಗಿ: ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಸಮಸಮಾಜ ನಿರ್ಮಾಣಕ್ಕೆ ಬಸವಣ್ಣ ಶ್ರಮಿಸಿದ್ದರು ಎಂದು ತಾಪಂ ಮಾಜಿ ಸದಸ್ಯ ಜಿ.ಶಿವಪ್ರಸಾದ್ ಗೌಡ ಹೇಳಿದರು.
ಗುಡೇಕೋಟೆ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ವರಲ್ಲೂ ಸಮಾನತೆ ಹೊಂದಿದ್ದ ವೀರಶೈವ ಧರ್ಮದ ಸಿದ್ಧಾಂತಗಳನ್ನು ಮೆಚ್ಚಿ ಬಸವಣ್ಣ ಅವರು ವೀರಶೈವ ಧರ್ಮ ಅನುಸರಿಸಿದರು. ಅನುಭವ ಮಂಟಪ ಸ್ಥಾಪಿಸಿ ತಳ ಸಮುದಾಯದವರಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದರು ಎಂದರು.
ಶರಣರು ಕಾಯಕದ ಮೂಲಕ ಗುರುತಿಸಿಕೊಂಡು ಸಮಾಜವನ್ನು ತಿದ್ದಲು ಮುಂದಾದರು. ಕಾಯಕವೇ ಕೈಲಾಸ ಎಂದು ಸಾಮಾಜಿಕ ಕ್ರಾಂತಿಯಿಂದ ಸಮಾನತೆಯ ಮಂತ್ರ ಬೋಧಿಸಿದರು.
ಬಸವಣ್ಣ ಅವರು ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ಸಮಾನ ಸ್ಥಾನ ಕಲ್ಪಿಸಿ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾದರು. ಅನುಭವ ಮಂಟಪದ ಮೂಲಕ ಸರ್ವರಿಗೂ ಸಮಾನತೆ ರೂಪಿಸಿದ್ದರು. ಶರಣರ ಮಾರ್ಗದಲ್ಲಿ ಸಾಗಿ ಸಮಸಮಾಜ ನಿರ್ಮಾಣ ಮಾಡಬೇಕು ಎಂದರು.
ಬಸವಣ್ಣ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ಬಳಿಕ ಬಸವಣ್ಣ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರ ವೃತ್ತ ಎಂಬ ನಾಮಫಲಕ ಅನಾವರಣ ಗೊಳಿಸಲಾಯಿತು.
ಕರವೇ ಗ್ರಾಮ ಘಟಕದ ಅಧ್ಯಕ್ಷ ಜೆ.ಶಿವಕುಮಾರ್, ಪ್ರಮುಖರಾದ ದಿನ್ನೆ ನಾಗರಾಜ್, ಅಂಗಡಿ ಈಶ್ವರ್, ಮಠದ ಶಿವಕುಮಾರ್ ಸ್ವಾಮಿ, ಎರ‌್ರಿಸ್ವಾಮಿ, ಪೂಜಾರ್ ಸಿದ್ದಣ್ಣ, ಎಲೆ ಕರಿಬಸಜ್ಜಯ್ಯ, ಹೋಟೆಲ್ ವೀರಭದ್ರಪ್ಪ, ಜಿ.ನಿಂಗಣ್ಣ, ಜೋಡುಗಪ್ಲೆ ರಮೇಶ, ಪಿ.ಪಂಚಾಕ್ಷರಿ, ಪುಂಡಿ ವೀರೇಂದ್ರ, ಜೋಡುಗಪ್ಲೆ ನಾಗೇಶ್, ಎಂ.ವಿರೂಪಾಕ್ಷಿ ಇತರರಿದ್ದರು.