ಹರಪನಹಳ್ಳಿ ದಲಿತ ಸಂಘರ್ಷ ಸಮಿತಿಯಿಂದ ಬಿಇಒ ಲೇಪಾಕ್ಷಪ್ಪಗೆ ಮನವಿ ಸಲ್ಲಿಸಲಾಯಿತು. ದಸಂಸ ತಾಲೂಕು ಅಧ್ಯಕ್ಷ ಚಂದ್ರು, ಡಿಎಸ್‌ಎಸ್ (ಭೀಮಾವಾದ) ಸಂಘದ ತಾಲೂಕು ಅಧ್ಯಕ್ಷ ಕೆ.ಸುಭಾಷ್, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಪದಾಧಿಕಾರಿಗಳಾದ ಅಂಜಿನಿ, ಶಶಿಕುಮಾರ್, ಮಾರುತಿ, ಸುರೇಶ್, ದೇವರಾಜ್, ಸುನೀಲ್ ಮತ್ತಿಹಳ್ಳಿ, ಮಂಜುನಾಥ ಜಿಟ್ಟಿನಕಟ್ಟಿ ಇತರರಿದ್ದರು. 
ಬಳ್ಳಾರಿ

ಸಭೆಗೆ ಗೈರಾದ ಶಿಕ್ಷಕನಿಗೆ ಬೆದರಿಕೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕಾಶಿನಾಥ ಬೆದರಿಕೆ

ಹರಪನಹಳ್ಳಿ: ಗುಂಡಗತ್ತಿಯ ಶ್ರೀ ವೆಂಕಟೇಶ್ವರ ಅನುದಾನಿತ ಪ್ರೌಢ ಶಾಲೆಯ ದೈಹಿಕಶಿಕ್ಷಣ ಶಿಕ್ಷಕ ಕುಮಾರ್ ಸಭೆಗೆ ಗೈರಾದ ಕಾರಣ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕಾಶಿನಾಥ ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅಮಾನುತು ಗೊಳಿಸುವ ಬೆದರಿಕೆ ಹಾಕಿರುವುದನ್ನು ಖಂಡಿಸಿ ಶುಕ್ರವಾರ ದಸಂಸ ವತಿಯಿಂದ ಬಿಇಒ ಎಚ್.ಲೇಪಾಕ್ಷಪ್ಪಗೆ ಮನವಿ ಸಲ್ಲಿಸಲಾಯಿತು.

ಶಾಲೆಯಲ್ಲಿ ನಡೆದ ಸಭೆಗೆ ಗೈರಾಗಿರುವುದೇ ಅಪರಾಧವೆಂಬಂತೆ ಶಿಕ್ಷಕ ಕುಮಾರ್‌ಗೆ ಕಾಶಿನಾಥ ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಆದ್ದರಿಂದ ಕಾಶಿನಾಥ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.