9ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ ಅರ್ಚನಾ ಪಕ್ಕೀರಪ್ಪಗೆ ಕಂಪ್ಲಿಯ ಶ್ರೀವಿದ್ಯಾಸಾಗರ ಇಂಟರ್‌ನ್ಯಾಷನಲ್ ಸ್ಕೂಲ್‌ನ 23ನೇ ವರ್ಷದ ವಾರ್ಷಿಕೋತ್ಸವದಲ್ಲಿ ನವಭಾರತ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ನಾಗೇಶ್ವರರಾವ್ ಪ್ರಮಾಣ ಪತ್ರ ವಿತರಿಸಿದರು. ಪ್ರಮುಖರಾದ ಕೆ.ಶ್ರೀನಿವಾಸ ಪ್ರಸಾದ್, ಸಾಯಿ ಕಿಶೋರ್ ಪಾಲೇಟಿ, ರೋಹಿಣಿ ಪೋಟ್ನೂರಿ, ಟಿ.ಕೊಟ್ರೇಶ್ ಇದ್ದರು.
ಕಂಪ್ಲಿ : ಪಠ್ಯದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುವಂತೆ ಮಕ್ಕಳನ್ನು ಪ್ರೇರೇಪಿಸುವಲ್ಲಿ ಪಾಲಕರು, ಶಿಕ್ಷಕರು ಜಾಗೃತಿವಹಿಸಬೇಕು ಎಂದು ಇಲ್ಲಿನ ನವಭಾರತ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ನಾಗೇಶ್ವರರಾವ್ ಹೇಳಿದರು.
ಪಟ್ಟಣದ ಶ್ರೀವಿದ್ಯಾಸಾಗರ ಇಂಟರ್‌ನ್ಯಾಷನಲ್ ಸ್ಕೂಲ್‌ನ 23ನೇ ವರ್ಷದ ವಾರ್ಷಿಕೋತ್ಸವದ ಬಹುಮಾನ ವಿತರಣಾ ದಿನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಮಕ್ಕಳು ಕೇವಲ ಪಠ್ಯದ ಹುಳುವಾಗಬಾರದು. ಸರ್ವಾಂಗೀಣ ಅಭಿವೃದ್ಧಿಗೊಳ್ಳಲು ಪಠ್ಯ ಮತ್ತು ಪಠ್ಯೇತರ ಎರಡಲ್ಲೂ ಮೇಲುಗೈ ಸಾಧಿಸುವ ಕೌಶಲ ಕಲಿಸಬೇಕು ಎಂದರು.
ಜೆಸ್ಕಾಂ ಎಇಇ ಕೆ.ಶ್ರೀನಿವಾಸ ಪ್ರಸಾದ್ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿಯೇ ಭವಿಷ್ಯದ ಕನಸನ್ನು ಜಾಗೃತಿಗೊಳಿಸಬೇಕು. ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಿದೆ ಎಂದರು. ಹೆಚ್ಚು ಅಂಕಗಳಿಸಿದ, ನಾನಾ ಕ್ರೀಡೆಗಳಲ್ಲಿ ವಿಜೇತ, ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಮೆಡೆಲ್ ನೀಡಿ ಗೌರವಿಸಲಾಯಿತು.ಶ್ರೀವಿದ್ಯಾಸಾಗರ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಚಾರ್ಯ ಸಾಯಿ ಕಿಶೋರ್ ಪಾಲೇಟಿ, ನವಭಾರತ ವಿದ್ಯಾವರ್ಧಕ ಸಂಘದ ನಿರ್ದೇಶಕಿ ರೋಹಿಣಿ ಪೋಟ್ನೊರಿ, ವರ್ತಕ ಟಿ.ಕೊಟ್ರೇಶ್ ಸೇರಿ ಇತರರಿದ್ದರು.