ಕಂಪ್ಲಿ ಸಮೀಪದ ದೇವಲಾಪುರ ಹೊರವಲಯದ ಕಣಿವೆ ಮಾರೆಮ್ಮ ದೇವಸ್ಥಾನ ಬಳಿ ತಾಳೆ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಬಿದ್ದಿದ್ದರಿಂದ ಜನರು ತಾಳೆ ಎಣ್ಣೆ ತುಂಬಿಕೊಳ್ಳಲು ಮುಗಿಬಿದ್ದಿದ್ದರು.  
ಬಳ್ಳಾರಿ

ದೇವಲಾಪುರ ಬಳಿ ಟ್ಯಾಂಕರ್ ಪಲ್ಟಿ

ಅಶೋಕ್ ಕುಮಾರ್ ಎನ್
ಕಂಪ್ಲಿ: ದೇವಲಾಪುರ ಹೊರವಲಯದ ಕಣಿವೆ ಮಾರೆಮ್ಮ ದೇವಸ್ಥಾನ ಬಳಿ ತಾಳೆ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗದ್ದೆಗೆ ಶುಕ್ರವಾರ ಬಿದ್ದಿದೆ.
ಬೆಂಗಳೂರಿನಿಂದ ಗಂಗಾವತಿಗೆ ಕಡೆ ತೆರಳುತ್ತಿದ್ದ 20 ಸಾವಿರ ಲೀಟರ್ ಸಂಗ್ರಹ ಸಾಮರ್ಥ್ಯದ ಟ್ಯಾಂಕರ್ ಎದುರಿಗೆ ಬರುತ್ತಿದ್ದ ಬೈಕ್‌ಗಳಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಮುಂದಾದಾಗ ನಿಯಂತ್ರಣ ತಪ್ಪಿ ಬಿದ್ದಿದ್ದು ಯಾರಿಗೂ ಪ್ರಾಣಾಪಾಯವಾಗಿಲ್ಲ. ಟ್ಯಾಂಕರ್‌ನಿಂದ ತಾಳೆ ಎಣ್ಣೆ ಸೋರಿಕೆಯಾಗಿದ್ದು, ಸುತ್ತಲಿನ ನೂರಾರು ಜನ ಕೊಡ, ಬಕೆಟ್, ಚಿಕ್ಕ ಡ್ರಮ್, ಪಾತ್ರೆಗಳನ್ನು ತೆಗೆದುಕೊಂಡು ಬಂದು ಎಣ್ಣೆ ತುಂಬಿಕೊಳ್ಳಲು ಪೈಪೋಟಿ ನಡೆಸಿದರು.
ರಸ್ತೆ ಮೇಲೆ ಹೆಚ್ಚಿನ ವಾಹನಗಳು ನಿಂತಿದ್ದರಿಂದ ಕೆಲ ಕಾಲ ಸಂಚಾರ ಸಿಕ್ಕಾಗಿತ್ತು. ಕುಡತಿನಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.