ಸಿರಗುಪ್ಪ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮೈದಾನದಲ್ಲಿ ಆರೋಗ್ಯ ಅರಿವು ಜಾಗೃತಿ ಬೀದಿ ನಾಟಕಕ್ಕೆ ಆಸ್ಪತ್ರೆ ಆಡಳಿತಾಧಿಕಾರಿ ಸಾಯಿಕುಮಾರ ಚಾಲನೆ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಖಾಸಿಂ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭೀಮರಾಜರೆಡ್ಡಿ, ಆಪ್ತ ಸಮಾಲೋಚಕ ಮಲ್ಲೇಶಪ್ಪ ಇತರರಿದ್ದರು.
ಸಿರಗುಪ್ಪ: ಸ್ವಚ್ಛತೆ, ಮಾನಸಿಕ ಆರೋಗ್ಯ, ತಾಯಿ-ಮಕ್ಕಳ ಆರೋಗ್ಯ, ಕ್ಷಯ ರೋಗ, ಬಾಲ್ಯವಿವಾಹ, ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಸಾಯಿಕುಮಾರ ತಿಳಿಸಿದರು.
ಪಟ್ಟಣದ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮೈದಾನದಲ್ಲಿ ಆರೋಗ್ಯ ಇಲಾಖೆ ಮತ್ತು ನೇತ್ರಕಲಾ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಅರೋಗ್ಯ ಅರಿವು ಜಾಗೃತಿ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯ್ರಕಮದಡಿ ದೊರೆಯುವ ಅನೇಕ ಕಾರ್ಯಕ್ರಮಗಳನ್ನು ಜನರು ಸದ್ಬಳಕೆ ಮಾಡಿಕೊಳ್ಳಿ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಧ್ಯೇಯ ವಾಕ್ಯವನ್ನು ಮರೆಯಬಾರದು ಎಂದರು. ಕ್ಷಯ, ಕುಷ್ಟರೋಗ, ಆರೋಗ್ಯ ಕಾರ್ಡ್, ತಾಯಿ ಮತ್ತು ಮಗುವಿನ ಆರೈಕೆ, ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ, ಹದಿಹರೆಯದ ಆರೋಗ್ಯ, ಋತುಚಕ್ರ, ನೈರ್ಮಲ್ಯ, ಸ್ನೇಹ ಕ್ಲಿನಿಕ್, ಮಾನಸಿಕ ಆರೋಗ್ಯ ಕುರಿತು ಜಾಗೃತಿ ಮೂಡಿಸಲಾಯಿತು.
ಆರೋಗ್ಯ ಸಂಯೋಜಕರಾದ ಸುನೀತಾ, ಕೇಶವ, ನೇತ್ರ ಕಲಾ ಸಂಘದ ಕಲಾವಿದರಾದ ರಾಮಪ್ಪ, ಶಿವಪ್ಪ, ಮುತ್ತಣ್ಣ, ತಿಮ್ಮಪ್ಪ, ನೀಲಮ್ಮ, ಗೌರಮ್ಮ, ಶಂಕರ ಇತರರಿದ್ದರು.