ಬಸ್‌ಗಳ ನಿಲುಗಡೆಗೆ ಆಗ್ರಹಿಸಿ ಸಂಡೂರು ತಾಲೂಕು ಬನ್ನಿಹಟ್ಟಿ ಕ್ರಾಸ್ ಬಳಿ ವಿದ್ಯಾರ್ಥಿಗಳು ಸಂಚಾರ ತಡೆದು ಪ್ರತಿಭಟನೆ ನಡೆಸಿದರು.  
ಬಳ್ಳಾರಿ

ಬಸ್‌ಗಳ ನಿಲುಗಡೆಗೆ ಕ್ರಮ ವಹಿಸಿ

ಅಶೋಕ್ ಕುಮಾರ್ ಎನ್
ಸಂಡೂರು: ಬಸ್‌ಗಳ ನಿಲುಗಡೆಗೆ ಆಗ್ರಹಿಸಿ ಬನ್ನಿಹಟ್ಟಿ ಕ್ರಾಸ್ ಬಳಿ ಬನ್ನಿಹಟ್ಟಿ, ನಾಗಲಾಪುರ ಗ್ರಾಮದ ವಿದ್ಯಾರ್ಥಿಗಳು ಬುಧವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ನಾಗಲಾಪುರ, ಗಂಗಲಾಪುರ, ಬನ್ನಿಹಟ್ಟಿ, ಲಿಂಗದಳ್ಳಿ ಗ್ರಾಮದ 300ರಿಂದ 350 ವಿದ್ಯಾರ್ಥಿಗಳು ಬನ್ನಿಹಟ್ಟಿ ಕ್ರಾಸ್‌ನಿಂದ ಸಂಡೂರು ಇಲ್ಲವೇ ಬಳ್ಳಾರಿಗೆ ಶಾಲೆ-ಕಾಲೇಜಿಗೆ ತೆರಳುತ್ತಾರೆ. ದಾವಣಗೆರೆ, ಮಂತ್ರಾಲಯ, ಹರಿಹರ ಬಸ್‌ನಲ್ಲಿ ಕಡಿಮೆ ಸಂಖ್ಯೆಯ ಪ್ರಯಾಣಿಕರಿದ್ದರೂ ನಿಲ್ಲಿಸುವುದಿಲ್ಲ. ಕೂಡ್ಲಿಗಿ ಹಾಗೂ ಸಂಡೂರು ಡಿಪೋ ಬಸ್‌ಗಳು ಮಾತ್ರ ನಿಲ್ಲಿಸುತ್ತವೆ. ಆದರೆ, ಈ ಬಸ್‌ಗಳು 9.30ರ ನಂತರ ಬರುತ್ತವೆ. ಈ ಬಸ್‌ನಲ್ಲಿ ಶಾಲೆ, ಕಾಲೇಜಿಗೆ ಹೋಗುವುದರೊಳಗೆ ತರಗತಿಗಳು ಆರಂಭವಾಗಿರುತ್ತವೆ. ತಡವಾಗಿ ಹೋದರೆ ಶಾಲೆ, ಕಾಲೇಜುಗಳಲ್ಲಿ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ರೈತ ವಿರೂಪಾಕ್ಷಿಗೌಡ, ಪ್ರಮುಖರಾದ ಪ್ರವೀಣ್, ಉಮೇಶ್, ಬೊಗೇಶ್ ರೆಡ್ಡಿ, ಪ್ರಕಾಶಸ್ವಾಮಿ, ಹನುಮಂತ ಇತರರಿದ್ದರು.