ಕಂಪ್ಲಿ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳೆಯರು ಮತ್ತು ಮಕ್ಕಳ ಕಾವಲು ಸಮಿತಿ ಸಭೆಯಲ್ಲಿ ಬಳ್ಳಾರಿ ಎಸಿ ಎಚ್.ಡಿ.ರಾಜೇಶ್ ಮಾತನಾಡಿದರು. ಅಧಿಕಾರಿಗಳಾದ ಜೂಗಲ ಮಂಜುನಾಯಕ, ಬಿ.ಮಲ್ಲಿಕಾರ್ಜುನ, ಕೆ.ಬಿ.ವಾಸುಕುಮಾರ್, ಎಚ್.ಸಿ.ರಾಘವೇಂದ್ರ, ಸಿ.ತಿಪ್ಪೇಶಪ್ಪ ಇತರರಿದ್ದರು. 
ಬಳ್ಳಾರಿ

ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗದಂತೆ ಕ್ರಮವಹಿಸಿ

ಪ್ರಮುಖ ಮುಖ್ಯಾಂಶಗಳು

  • ಉಲ್ಲಂಘನೆ

ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗದಂತೆ ಕ್ರಮವಹಿಸಿ

ಕಂಪ್ಲಿ: ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಹಕ್ಕುಗಳ ಕುರಿತು ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸಿ ಎಚ್.ಡಿ.ರಾಜೇಶ್ ಹೇಳಿದರು.
ನಗರದ ಪುರಸಭೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆಯಲ್ಲಿ ಮಾತನಾಡಿದರು. ಬಾಲ್ಯವಿವಾಹ ನಡೆದರೆ ಬಾಲ್ಯವಿವಾಹ ನಿಷೇಧಾಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಎಲ್ಲ ಅಧಿಕಾರಿಗಳು ಸಮನ್ವಯ ಸಾಧಿಸಿ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗದಂತೆ ಕ್ರಮವಹಿಸಬೇಕು. ಸೇಫ್ ಟಚ್-ಅನ್ ಸೇಫ್ ಟಚ್ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಶಾಲೆಯ ಶೌಚಗೃಹಗಳನ್ನು ಸ್ವಚ್ಛವಾಗಿಡಬೇಕು.
ಸ್ಥಳೀಯ ಆಡಳಿತದಿಂದ ನೀರಿನ ವ್ಯವಸ್ಥೆ ಪಡೆದುಕೊಳ್ಳಿ. ಮಕ್ಕಳಸ್ನೇಹಿ ಶಾಲೆಯನ್ನಾಗಿ ರೂಪಿಸುವಲ್ಲಿ ಶಿಕ್ಷಕರು ಮುತುವರ್ಜಿವಹಿಸಬೇಕು ಎಂದರು.
ಮಹಿಳೆಯರು ಮತ್ತು ಮಕ್ಕಳ ಕಾವಲು ಸಮಿತಿ ರಚನೆ, ಕರ್ತವ್ಯ, ಜವಾಬ್ದಾರಿಗಳು, ಕ್ರಿಯಾಯೋಜನೆ ರೂಪಿಸುವುದು, ತಡೆದ ಬಾಲ್ಯವಿವಾಹ ಹಾಗೂ ಪೋಕ್ಸೋ ಪ್ರಕರಣಗಳ ಸ್ಥಿತಿಗತಿ, ಭಿಕ್ಷಾಟನೆಗೆ ಒಳಗಾದ ಮಕ್ಕಳ ರಕ್ಷಣೆ, ಶಾಲೆಯಿಂದ ಹೊರಗುಳಿದ ಮಕ್ಕಳು, ಸಂಕಷ್ಟದಲ್ಲಿರುವ ಮಕ್ಕಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ಸಭೆಗೆ ಶಿಕ್ಷಣ ಇಲಾಖೆ, ಸಿಡಿಪಿಒ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳು ಗೈರಾಗಿ ಕೆಳ ಹಂತದ ಅಧಿಕಾರಿಗಳನ್ನು ಕಳಿಸಿದ್ದರಿಂದ ಗರಂ ಆದ ಎಸಿ ಎಚ್.ಡಿ.ರಾಜೇಶ್ ಮುಂದಿನ ಸಭೆಗಳಿಗೆ ಕಡ್ಡಾಯವಾಗಿ ಖುದ್ದಾಗಿ ಇಲಾಖಾಧಿಕಾರಿಗಳೇ ಹಾಜರಾಗಬೇಕು. ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.

ಮಕ್ಕಳ ಹಕ್ಕುಗಳ ನಿಗಾ ಘಟಕದ ಸದಸ್ಯ ಡಾ.ಎಚ್.ಸಿ.ರಾಘವೇಂದ್ರ, ರೀಡ್ಸ್ ಸಂಸ್ಥೆ ನಿರ್ದೇಶಕ ಸಿ.ತಿಪ್ಪೇಶಪ್ಪ, ತಹಸೀಲ್ದಾರ್ ಜೂಗಲ ಮಂಂಜುನಾಯಕ, ಅಧಿಕಾರಿಗಳಾದ ಬಿ.ಮಲ್ಲಿಕಾರ್ಜುನ, ಕೆ.ಬಿ.ವಾಸುಕುಮಾರ್, ಡಾ.ಜಿ.ಅರುಣ್, ಲತೀಫಾಬೇಗಂ, ಸುಜಾತಾ, ಟಿ.ಎಂ.ಬಸವರಾಜ, ಪಿ.ಬಸವರಾಜ, ಮಲ್ಲಪ್ಪ, ಗಾದಿಲಿಂಗಪ್ಪ, ಪ್ರಶಾಂತ ಚಿತ್ರಗಾರ ಇತರರಿದ್ದರು.