ಕೊಟ್ಟೂರಿನಲ್ಲಿ ರೈತಸಂಘದಿಂದ ಜೆಸ್ಕಾಂ ಎಇಇ ಆರ್.ನಾಗರಾಜ್‌ಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಎ.ಗಾಳೆಪ್ಪ, ತಾಲೂಕು ಅಧ್ಯಕ್ಷೆ ಸಿ.ರೇಖಾ, ನಡುಮಾವಿನಹಳ್ಳಿ ಘಟಕ ಅಧ್ಯಕ್ಷ ನಾಗಪ್ಪ, ಉಜ್ಜಿನಿ ಘಟಕ ಅಧ್ಯಕ್ಷ ಹಾಲೇಶ್, ಬೆನಕನಹಳ್ಳಿ ಘಟಕದ ಅಧ್ಯಕ್ಷ ನಾಗನಗೌಡ ಇದ್ದರು.
ಕೊಟ್ಟೂರು: ತಾಲೂಕಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ನಿರಂತರ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಜೆಸ್ಕಾಂ ಎಇಇ ಆರ್.ನಾಗರಾಜಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಸಿ.ಎ.ಗಾಳೆಪ್ಪ ಮಾತನಾಡಿ, ತಾಲೂಕಿನ ಉಜ್ಜಿನಿ, ನಡುಮಾವಿನಹಳ್ಳಿ, ಹಿರೇವಡರಹಳ್ಳಿ, ಜಾಗಟಗೇರಿ, ಮೂರ್ತಿನಾಯಕನಹಳ್ಳಿ ಸೇರಿ ವಿವಿಧೆಡೆ ಶನಿವಾರ ದಿನ ಪೂರ್ತಿ ವಿದ್ಯುತ್ ಸಂಪರ್ಕ ಇಲ್ಲದೆ ಸಾರ್ವಜನಿಕರು ಸಮಸ್ಯೆ ಅನುಭವಿಸಿದರು. ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗದಂತೆ ನಿರಂತರ ವಿದ್ಯುತ್ ಸೌಲಭ್ಯ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಈ ಸಮಸ್ಯೆ ಮರುಕಳಿಸಿದರೆ ಕಚೇರಿಗೆ ಬೀಗ ಹಾಕಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜೆಸ್ಕಾಂ ಎಇಇ ಆರ್.ನಾಗರಾಜ್ ಮಾತನಾಡಿ, ತಾಲೂಕಿನ ಎಲ್ಲ ಲೈನ್ ಸರಿಪಡಿಸಿದ್ದು, ಉಳಿದ ಸಮಸ್ಯೆಗಳನ್ನು ಸರಿಪಡಿಸಿ ವಿದ್ಯುತ್ ಸರಬರಾಜು ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಸಂಘದ ತಾಲೂಕು ಅಧ್ಯಕ್ಷೆ ಸಿ.ರೇಖಾ, ನಡುಮಾವಿನಹಳ್ಳಿ ಘಟಕ ಅಧ್ಯಕ್ಷ ನಾಗಪ್ಪ, ಉಜ್ಜಿನಿ ಘಟಕ ಅಧ್ಯಕ್ಷ ಹಾಲೇಶ್, ಬೆನಕನಹಳ್ಳಿ ಘಟಕದ ಅಧ್ಯಕ್ಷ ನಾಗನಗೌಡ, ಪ್ರಮುಖರಾದ ಅಂಜೀನಪ್ಪ, ಸಿದ್ಧಲಿಂಗಪ್ಪ, ಬಸವರಾಜ್ ಇತರರಿದ್ದರು.