ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾೃಕ್ ಅಳವಡಿಸಿರುವುದು. 
ಬಳ್ಳಾರಿ

ಸಿಂಥೆಟಿಕ್ ಟ್ರಾೃಕ್ ಅವೈಜ್ಞಾನಿಕ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಅವೈಜ್ಞಾನಿಕ
ಬಳ್ಳಾರಿ : ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಅಳವಡಿಸಿರುವ ಸಿಂಥೆಟಿಕ್ ಟ್ರಾೃಕ್ ಬಹಳಷ್ಟು ಕಡೆ ಅವೈಜ್ಞಾನಿಕವಾಗಿದ್ದಾಗಿದೆ. ಲೋಪ ಹಾಗೂ ಕಳೆಪ ಕಾಮಗಾರಿಯಿಂದ ಕೂಡಿರುವುದರ ಬಗ್ಗೆ ಕ್ರೀಡಾ ಪರಿಣತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಅಳವಡಿಸಿರುವ ಸಿಂಥೆಟಿಕ್ ಟ್ರಾೃಕ್‌ನ್ನು ಸ್ಟೇ ಟ್ರಾೃಕ್ ಎಂಬುದಾಗಿ ಕರೆಯಲಾಗುತ್ತಿದೆ. ಮೂರು ವಿಧದ ಟ್ರಾೃಕ್‌ಗಳಲ್ಲಿನ ಇದು ಕೊನೆಯದ್ದಾಗಿದೆ. ಟ್ರಾೃಕ್ ಸಮತಟ್ಟಾಗಿಲ್ಲ. ಒಂದು ಕಡೆ ಆಪ್ ಮತ್ತೊಂದು ಕಡೆ ಡೌನ್‌ಯಿದೆ. ಕೇವಲ ಓಟಕ್ಕೆ ಮಾತ್ರ ಮಾರ್ಕಿಂಗ್ ಮಾಡಿದ್ದು, ಇತರೆ ಅಥ್ಲೆಟಿಕ್ ಕ್ರೀಡೆಗಳಿಗೆ ಕೋರ್ಟ್‌ಗಳನ್ನು ಮಾಡಿಲ್ಲ. ಮುಖ್ಯವಾಗಿ ಟ್ರಾೃಕ್ ತುಂಬಾ ಗಟ್ಟಿ (ಹಾರ್ಡ್) ಆಗಿದೆ. ಇನ್ನೂ ಮೃದುವಾಗಿರಬೇಕು ನಡೆದರೆ, ಓಡಿದರೆ ಮೃದು ಅನ್ನಿಸಲ್ಲ. ರಸ್ತೆ ಮೇಲೆ ನಡೆದಂತಿದೆ. ಫ್ಲಡ್ ಲೈಟ್ ಅಳವಡಿಕೆಯಲ್ಲೂ ದೋಷವಿದ್ದು, ನಾಲ್ಕು ದಿಕ್ಕುಗಳಿಗೆ ಸರಿಯಾಗಿ ಬೆಳಕು ಬೀಳುತ್ತಿಲ್ಲ. ಟ್ರಾೃಕ್ ಸಮತಟ್ಟವಿಲ್ಲದ ಕಾರಣ ಕೆಲವಡೆ ನೀರು ನಿಲ್ಲುತ್ತಿವೆ ಎಂಬ ಅಕ್ಷೇಪಣೆಗಳು ವ್ಯಕ್ತವಾಗಿವೆ.
ಅಲ್ಲದೆ, ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಿಂಥೆಟಿಕ್ ಟ್ರಾೃಕ್ ಮಧ್ಯೆ ನೈಸರ್ಗಿಕ ಹುಲ್ಲಿನ ಹೊದಿಕೆ, ಚೈನ್ ಲಿಂಕ್ ಫೆನ್ಸಿಂಗ್ ಅಳವಡಿಸಿಲ್ಲ. ಆದ್ದರಿಂದ, ಜಿಲ್ಲೆಯ ಬಿರು ಬಿಸಿಲಿಗೆ ದಿನೇದಿನೆ ಟ್ರಾೃಕ್ ಹಾಳಾಗುತ್ತಿದೆ. ಟ್ರಾೃಕ್ ನಿರ್ಮಾಣಗೊಂಡು ಮೂರು ವರ್ಷ ಕಳೆಯುತ್ತಾ ಬಂದರೂ ಈವರೆಗೆ ರಾಜ್ಯ ಹಾಗೂ ಜಿಲ್ಲಾಮಟ್ಟದ ಅಥ್ಲೆಟಿಕ್ ನಡೆದಿಲ್ಲ.
ಪರಿಕರಗಳ ಕೊರತೆ : ಅಥ್ಲೆಟಿಕ್ ಕ್ರೀಡೆಗಳಲ್ಲಿ 100, 200, 400, 1500 ಮೀಟರ್, ಐದು ಹಾಗೂ ಹತ್ತು ಸಾವಿರ ಓಟಗಳಿವೆ. ಜತೆಗೆ 21 ಕಿ.ಮೀ. ಮ್ಯಾರಥಾನ್ ಓಟವೂ ಬರಲಿದೆ. ಇವುಗಳೊಂದಿಗೆ ಡಿಸ್ಕ್ ಥ್ರೋ, ಜಾವಲಿನ್ ಥ್ರೋ, ಹ್ಯಾಮರ್ ಥ್ರೋ, ಶಾಟ್‌ಫುಟ್, ಹೈ ಜಂಪ್, ಲಾಂಗ್ ಜಂಪ್, ತ್ರಿಪಲ್ ಜಂಪ್, ಪೋಲ್ ವಾಲ್ಟ್ ಸೇರಿ ಹಲವಾರು ಕ್ರೀಡೆಗಳು ಬರಲಿವೆ. ಆದರೆ, ಕ್ರೀಡೆಗಳು ಹಾಗೂ ಟ್ರಾೃಕ್‌ಗೆ ತಕ್ಕಂತೆ ಇಲ್ಲಿನ ಕ್ರೀಡಾ ಇಲಾಖೆಯಲ್ಲಿ ಪರಿಕರಗಳು ಸಮರ್ಪಕವಾಗಿಲ್ಲ ಎನ್ನಲಾಗುತ್ತಿದೆ.
ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳ ಯಾವುದೇ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾೃಕ್ ಸೌಲಭ್ಯ ಇಲ್ಲ. ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವವರು ಸಿಂಥೆಟಿಕ್ ಟ್ರಾೃಕ್‌ನಲ್ಲೇ ಅಭ್ಯಾಸ ನಡೆಸಬೇಕು. ಅಂತರ ಜಿಲ್ಲಾಮಟ್ಟದ ಕ್ರೀಡಾಕೂಟ ಸಿಂಥೆಟಿಕ್ ಟ್ರಾೃಕ್‌ನಲ್ಲೇ ನಡೆಯಬೇಕು. ಈವರೆಗೆ ಸೌಲಭ್ಯದ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಪ್ರಮುಖ ಕ್ರೀಡಾಕೂಟ ನಡೆಸಲು ಸಾಧ್ಯವಾಗಿಲ್ಲ. ಈಗ ಟ್ರಾೃಕ್ ಅಳವಡಿಸಿ ಮೂರು ವರ್ಷ ಕಳೆಯುತ್ತಿದೆ. ಟ್ರಾೃಕ್‌ನಲ್ಲಿ ಕೆಲ ಲೋಪ, ದೋಷಗಳು ಸರಿಪಡಿಸಿ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ನೆರವುಯಾಗಬೇಕಿದ್ದ ಅಧಿಕಾರಿಗಳು ಮೈಮರೆತಿದ್ದಾರೆ. ಕೇವಲ ದಸರಾ ಕ್ರೀಡಾಕೂಟದಲ್ಲಿ ಮೂರು ದಿನ ಆಟಕ್ಕೆ ಉಂಟು ಲೆಕ್ಕಯಿಲ್ಲ ಎಂಬಂತೆ ಕ್ರೀಡಾಕೂಟ ಆಯೋಜಿಸುವುದೇ ಒಂದು ದೊಡ್ಡ ಸಾಧನೆ ಎಂದಿಕೊಂಡಿದ್ದಾರೆ.
ಹಾಕಿ ಕೋಟ್ ಹಾಳು : ಕ್ರೀಡಾಂಗಣದ ಮುಂಭಾಗದಲ್ಲಿಯೇ ಕೆಲ ವರ್ಷಗಳ ಹಿಂದಯೇ ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಕಿ ಕೋಟ್ ಕೂಡ ಹಾಳಾಗಿದೆ. ಕೇವಲ ರಾಜ್ಯ ಹಾಗೂ ಜಿಲ್ಲಾಮಟ್ಟದ ಪಂದ್ಯಾವಳಿ ಆಯೋಜಿಸುವ ವೇಳೆ ಮಾತ್ರ ಕ್ರೀಡಾಂಗಣವನ್ನು ಸೂಕ್ತ ರೀತಿಯಲ್ಲಿ ಸಿದ್ಧಪಡಿಸಿರುತ್ತಾರೆ. ಆದರೆ, ನಿರಂತರ ನಿರ್ವಹಣೆ ಕೊರತೆಯಿಂದ ಪಂದ್ಯ ನಡೆಯುವ ವೇಳೆ ಕಳೆಪ ಕೋಟ್‌ನಲ್ಲಿ ಕ್ರೀಡಾಪಟುಗಳು ಗಾಯಗಳು ಆಗಿರುವ ಘಟನೆಗಳು ನಡೆದಿವೆ.
ಕೋಟ್..... ಸಿಂಥೆಟಿಕ್ ಟ್ರಾೃಕ್ ಅವೈಜ್ಞಾ ನಿಕ ಹಾಗೂ ಲೋಪದ ಬಗ್ಗೆ ಪರಿಶೀಲಿಸಿ, ದುರಸ್ತಿಗೊಳಿಸಲು ಕ್ರಮವಹಿಸುವೆ.
- ರಾಜು, ಪ್ರಭಾರ ಸಹಾಯಕ ನಿರ್ದೇಶಕ, ಕ್ರೀಡಾ ಇಲಾಖೆ, ಬಳ್ಳಾರಿ.