ಬಳ್ಳಾರಿಯಲ್ಲಿ ಆಯೋಜಿಸಿದ್ದ ವಿವೇಕ ಮಂಟಪ ಉಪನ್ಯಾಸ ಮಾಲಿಕೆಯಲ್ಲಿ ವಿವೇಕಾನಂದ ಪುತ್ಥಳಿಗೆ ಹೂ ಮಾಲೆ ಹಾಕಿ ಉದ್ಘಾಟಿಸಲಾಯಿತು. ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ನಿ.ಉಪನ್ಯಾಸಕ ಎನ್.ಬಸವರಾಜ, ವಿವೇಕ ಮಂಟಪದ ಸಂಯೋಜಕ ಪ್ರಭುದೇವ ಕಪ್ಪಗಲ್ಲು, ಸಿಎ ಸಿ.ಎರ‌್ರಿಸ್ವಾಮಿ, ಅಡವಿಸ್ವಾಮಿ ಇತರರಿದ್ದರು. 
ಬಳ್ಳಾರಿ

ವೇದಗಳ ಅಧ್ಯಯನ ಮಾಡಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಸನಾತನ
ಬಳ್ಳಾರಿ : ನಿಜವಾದ ಸನಾತ ನ ಧರ್ಮದ ಬಗ್ಗೆ ತಿಳಿಯಬೇಕೆಂದರೆ, ವೇದಗಳ ಅಧ್ಯಯನ ಮಾಡಬೇಕು ಎಂದು ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಪಾಂಚಜನ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿವೇಕ ಮಂಟಪ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು. ಸನಾತನ ಧರ್ಮ ದೇವರ ಕೇಂದ್ರೀತ ಧರ್ಮವಲ್ಲ, ಮಾನವ ಕೇಂದ್ರಿತ ಧರ್ಮವಾಗಿದೆ. ಬಹುತ್ವವೇ ಸನಾತನ ಧರ್ಮದ ತಳಹದಿ, ಬಹುತ್ವದ ಆಧಾರದ ಮೇಲೆ ಸನಾತನ ಭಾರತೀಯ ಸಂಸ್ಕೃತಿ ನಿಂತಿದೆ. ಇದನ್ನು ಅರಿಯದೆ ಬಹಳಷ್ಟು ಜನ ಕೇವಲ ಆಚರಣೆಗಳನ್ನೇ ಧರ್ಮ ಎಂದುಕೊಂಡಿದ್ದಾರೆ ಎಂದರು.