ಬಳ್ಳಾರಿ ಬಿಪಿಎಸ್‌ಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಮೇಯರ್ ಪಿ.ಗಾದೆಪ್ಪ ಉದ್ಘಾಟಿಸಿದರು. ಬಿಪಿಎಸ್‌ಸಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್, ಪತ್ರಕರ್ತ ಎಂ.ಅಹಿರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಕಲಾವಿದರಾದ ಹುಲುಗಪ್ಪ, ದೊಡ್ಡಬಸಪ್ಪ, ಹುಸೇನ್ ಸಾಬ್ ಇದ್ದರು. 
ಬಳ್ಳಾರಿ

ವಿದ್ಯಾರ್ಥಿಗಳು ಕ್ರೀಡೆ-ಕಲೆಗೆ ಆದ್ಯತೆ ನೀಡಲಿ

ಪ್ರಮುಖ ಮುಖ್ಯಾಂಶಗಳು

  • ನಾಡಿನ
  • ಹೆಮ್ಮೆಯ
  • ಕಲೆ
ಮೇಯರ್ ಪಿ.ಗಾದೆಪ್ಪ ಸಲಹೆ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ
ಬಳ್ಳಾರಿ: ಪ್ರತಿಯೊಬ್ಬರೂ ಶ್ರದ್ಧೆ, ಭಕ್ತಿ ಹಾಗೂ ಸ್ಪಷ್ಟ ಗುರಿಯಿಂದ ಮುನ್ನಡೆದರೆ ಯಶಸ್ಸು ಸಿಗುತ್ತದೆ ಎಂದು ಮೇಯರ್ ಪಿ.ಗಾದೆಪ್ಪ ಹೇಳಿದರು.
ಬಿಪಿಎಸ್‌ಸಿ ಶಾಲಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾಥಿಗಳು ಶಿಕ್ಷಣ, ಕ್ರೀಡೆ ಮತ್ತು ಕಲೆಗೆ ಆದ್ಯತೆ ನೀಡಬೇಕು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕಲೆ ಮತ್ತು ಛಲ ಅಡಗಿರುತ್ತದೆ. ಸರ್ಕಾರ ಯುವಜನರಲ್ಲಿರುವ ಕಲಾ ಪ್ರತಿಭೆ ಮತ್ತು ಕ್ರೀಡಾ ಕೌಶಲ ಪ್ರೋತ್ಸಾಹಿಸಲು ವಿವಿಧ ಯೋಜನೆ ಜಾರಿಗೆ ತಂದಿದೆ. ಕಲಾವಿದರು ಹಾಗೂ ಕ್ರೀಡಾಪಟುಗಳು ಪ್ರತಿಭೆ ಪ್ರದರ್ಶಿಸಲು ಸರ್ಕಾರ ವೇದಿಕೆ ಕಲ್ಪಿಸಿದ್ದು, ಇದನ್ನು ಪ್ರತಿಯೊಬ್ಬರೂ ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಯುವಜನತೆ ಇಂತಹ ವೇದಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಲಾಪ್ರತಿಭೆ ಪಸರಿಸಿ ದೇಶಕ್ಕೆ ಕೀರ್ತಿ ತರಬೇಕು ಎಂದರು.
ಕನ್ನಡ ಮತ್ತು ಸಂಸೃ ್ಕತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಮಾತನಾಡಿ, ಯುವ ಪೀಳಿಗೆಯಲ್ಲಿ ನಾಡಿನ ಕಲೆ, ಸಂಸೃ ್ಕತಿ ಮತ್ತು ಜಾನಪದದ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ರಾಜ್ಯಾದ್ಯಂತ ಕಾಲೇಜು ವಿದ್ಯಾರ್ಥಿಗಳಿಗಾಗಿ ಯುವ ಸೌರಭ ಸಾಂಸೃ ್ಕತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ನಮ್ಮ ನಾಡಿನ ಹೆಮ್ಮೆಯ ಕಲೆ ಮತ್ತು ಸಂಸ ್ಕೃತಿ ಪರಿಚಯಿಸಿ ಕಲಾಸಕ್ತಿ ಜಾಗೃತಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಕೆ.ಪುಟ್ಟರಾಜು ಗಾಯನ, ಶಾರದ ನಾಟ್ಯ ಅಕಾಡೆಮಿ ಕಲಾವೃಕ್ಷ ತಂಡದ ಸಮೂಹ ನೃತ್ಯ, ಮುದ್ದಮ್ಮ ಅವರ ಜಾನಪದ ಹಾಡು, ಸಿ.ಶಿವಪ್ಪ ತಂಡದ ಕಂಸಾಳೆ ಕಲೆ, ಮಲ್ಲಿಕಾರ್ಜುನ ಸ್ವಾಮಿ ತಂಡದ ವೀರಗಾಸೆಯ ಶೌರ್ಯಪೂರ್ಣ ಕುಣಿತ, ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಹಲವು ಪ್ರದರ್ಶನ ನಡೆದವು.