ಕೊಂಚಗೇರಿಯಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ತ್ರಿವೇಣಿ ಪತ್ತಾರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮುತ್ತಮ್ಮ ಯಂಕಪ್ಪ, ಸಿಡಿಪಿಒ ಪ್ರದೀಪ್, ಬಿಇಒ ಎಚ್. ಗುರಪ್ಪ, ಪ್ರಮುಖರಾದ ಹೊನ್ನುರಪ್ಪ ಕೆ., ಮೌನೇಶ್, ಹನುಮನಗೌಡ, ಎಚ್.ಸಿ. ರಾಘವೇಂದ್ರ, ವೆಂಕಟೇಶ್, ಎಚ್. ದುರುಗಪ್ಪ ಇತರರಿದ್ದರು. 
ಬಳ್ಳಾರಿ

ವಿದ್ಯಾರ್ಥಿಗಳಿಂದ ಕಾಂಪೌಂಡ್, ಕ್ಯಾಮರಾ, ನೀರಿಗೆ ಬೇಡಿಕೆ

ಶಾಮಸುಂದರ್ ಕೊಪ್ಪಳಕರ್
ಸಿರಿಗೇರಿ: ಬಾಲ್ಯದಲ್ಲಿ ಮಕ್ಕಳು ಹಕ್ಕುಗಳಿಂದ ವಂಚಿತರಾದರೆ ಭವಿಷ್ಯದಲ್ಲಿ ತೊಂದರೆ ಅನುಭವಿಸುತ್ತಾರೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ತ್ರಿವೇಣಿ ಪತ್ತಾರ್ ಹೇಳಿದರು.
ಕೊಂಚಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ-ಪ್ರೌಢ ಶಾಲೆಯಲ್ಲಿ ಜಿಪಂ, ತಾಪಂ, ಕಾನೂನು ಸೇವಾ ಪ್ರಾಧಿಕಾರ, ಗ್ರಾಪಂನಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಮಕ್ಕಳು ಟಿವಿ-ಮೊಬೈಲ್ ಚಟಕ್ಕೆ ಬಿದ್ದು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ತಹಸೀಲ್ದಾರ್ ಗೌಸಿಯಾ ಬೇಗಂ ಮಾತನಾಡಿ, ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು ಎಂದರು.
ಇದೇ ಸಂದರ್ಭದಲ್ಲಿ ಗ್ರಾಪಂನ ಮಕ್ಕಳ ಆಯ-ವ್ಯಯ ಮಂಡಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಹವಾಲು ಸ್ವೀಕಾರ ಸಂದರ್ಭ ಶಾಲಾ ಮೈದಾನ ಕೊರತೆ, ಕಾಂಪೌಂಡ್ ನಿರ್ಮಾಣ, ನೀರಿನ ವ್ಯವಸ್ಥೆ, ಗ್ರಾಮದ ಚರಂಡಿ ಸ್ವಚ್ಛತೆ, ಶಾಲೆಗೆ ಸಿಸಿ ಕ್ಯಾಮರಾ ಅಗತ್ಯ ಕುರಿತು ಹಲವು ಬೇಡಿಕೆಗಳನ್ನು ಮಂಡಿಸಿದರು.