ಕೇಂದ್ರ ವಿರುದ್ಧ ಫೆ.12ರಂದು ಮುಷ್ಕರ 
ಬಳ್ಳಾರಿ

ಕೇಂದ್ರ ವಿರುದ್ಧ ಫೆ.12ರಂದು ಮುಷ್ಕರ

ಪ್ರಮುಖ ಮುಖ್ಯಾಂಶಗಳು

  • ಕಾರ್ಮಿಕ
ಬಳ್ಳಾರಿ : ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಫೆ.12ರಂದು ದೇಶದಾದ್ಯಂತ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಮಿಕ ಸಂಘಗಳನ್ನು ನಿಯಂತ್ರಿಸಲು ಹಾಗೂ ಬಂಡವಾಳದ ದಾಳಿಯ ವಿರೋಧಿಸಿ ಕಾರ್ಮಿಕ ವರ್ಗ ಚಳುವಳಿಯನ್ನು ನಿಶ್ಯಕ್ತಗೊಳಿಸಲು ಉದ್ದೇಶಿಸಿದೆ. ಈ ಮುಷ್ಕರಕ್ಕೆ ರಾಷ್ಟ್ರಮಟ್ಟದಲ್ಲಿನ ಸಂಯುಕ್ತ ಕಿಸಾನ್ ಮೋರ್ಚಾ, ಸಂಯುಕ್ತ ಹೋರಾಟ ಕರ್ನಾಟಕ ಸಂಘ ಸೇರಿದಂತೆ ನಾನಾ ಸಂಘಗಳು ಬೆಂಬಲಿಸಿವೆ. ಮನೆರಾಗ ಯೋಜನೆಯನ್ನು ವಿಬಿ ಜಿ ರಾಮ್ ಜಿ ಎಂದು ಬದಲಾಯಿಸಿ ಉದ್ಯೋಗ ಖಾತ್ರಿಯ ಹಕ್ಕನ್ನೇ ಕಸಿದುಕೊಂಡು ಹಳ್ಳಿಯ ಬಡಜನರ ಆಸರೆಯನ್ನು ಕಿತ್ತುಕೊಂಡಿದೆ. ಆದ್ದರಿಂದ, ದುಡಿಯುವ ಕಾರ್ಮಿಕ ಹಕ್ಕು ಹಾಗೂ ಸಾರ್ವಜನಿಕ ಉದ್ಯಮಗಳನ್ನು ಉಳಿಸಲು, ರೈತರ ನ್ಯಾಯಬದ್ಧ ಬೇಡಿಕೆಗಳನ್ನು ಎತ್ತಿ ಹಿಡಿಯಲು ಹೋರಾಟ ಕೈಗೊಂಡಿದೆ. ಈ ಮುಷ್ಕರಕ್ಕೆ ಲಕ್ಷಾಂತರ ಜನರು ಭಾಗವಹಿಸಿ ಯಶ್ವಸಿಗೊಳಿಸಬೇಕು ಎಂದು ಕರೆ ನೀಡಿದರು. ಪದಾಧಿಕಾರಿಗಳಾದ ಎಚ್.ಆದಿಮೂರ್ತಿ, ಜೆ.ಸತ್ಯಬಾಬು, ಡಿ.ವಿ.ಸೂರ್ಯನಾರಾಯಣ, ವಿ.ಎಸ್.ಶಿವಶಂಕರ, ಎಸ್.ಕೃಷ್ಣಪ್ಪ ಇದ್ದರು.