ಕೂಡ್ಲಿಗಿ ಗ್ರಾಮ ದೇವತೆ ಶ್ರೀ ಊರಮ್ಮ ದೇವಿಗೆ ಬಂಗಾರದ ಮುಖ ಕವಚ ಹಾಗೂ ಕೀರೀಟವನ್ನು ದೈವಸ್ಥರು ಅರ್ಪಿಸಿದರು. ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಪ್ರಮುಖರಾದ ಉದಯ ಜನ್ನು, ಎಸ್.ಸುರೇಶ್, ಸಿ.ಬಿ.ಜಯರಾಂ ನಾಯಕ, ಟಿ.ಜಿ.ಮಲ್ಲಿಕಾರ್ಜುನ ಗೌಡ, ಶೆಟ್ರು ಬಸವರಾಜ, ಬಣಕಾರ ಮಂಜುನಾಥ, ಢಾಣಿ ರಾಘವೇಂದ್ರ ಇತರರಿದ್ದರು. 
ಬಳ್ಳಾರಿ

ದೇವಸ್ಥಾನಗಳಲ್ಲಿ ಸೌಕರ್ಯ ಕಲ್ಪಿಸಲು ಕ್ರಮ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಸೌಕರ್ಯ

ದೇವಸ್ಥಾನಗಳಲ್ಲಿ ಸೌಕರ್ಯ ಕಲ್ಪಿಸಲು ಕ್ರಮ

ಕೂಡ್ಲಿಗಿ: ಕ್ಷೇತ್ರದಲ್ಲಿ ಸಾಮಾಜಿಕ, ಶೈಕ್ಷಣಿಕ ಸುಧಾರಣೆ ಜತೆ ಧಾರ್ಮಿಕ ಪುನರುಜ್ಜೀವನ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಗ್ರಾಮ ದೇವತೆ ಶ್ರೀ ಊರಮ್ಮ ದೇವಿಗೆ ಬಂಗಾರದ ಮುಖ ಕವಚ ಹಾಗೂ ಕಿರೀಟ ಧಾರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಕಳೆದ ವರ್ಷ ಮೂರು ಕೋಟಿ ರೂ. ವೆಚ್ಚದಲ್ಲಿ ಶ್ರೀ ಊರಮ್ಮ ದೇವಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಅಸಂಖ್ಯಾತ ಭಕ್ತರು ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ್ದು, ಶ್ಲಾಘನೀಯ ಎಂದರು.
ಕಳೆದ ವರ್ಷ ನಡೆದ ಅದ್ದೂರಿ ಜಾತ್ರೆಯಲ್ಲಿ ಭಕ್ತರು ನೀಡಿದ ದೇಣಿಗೆಯಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ ದೇವಿಗೆ ಸ್ವರ್ಣ ಮುಖ ಕವಚ ಹಾಗೂ ಕಿರೀಟ ಮಾಡಿಸಲಾಗಿದೆ.
ನಾನು ಶಾಸಕನಾಗಿ ಈ ಭಾಗದ ಅನೇಕ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಿ ಧಾರ್ಮಿಕವಾಗಿ ಪುನರುಜ್ಜೀವನ ಗೊಳಿಸಿರುವ ಸಮಾಧಾನವಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲ ದೇವಸ್ಥಾನಗಳಿಗೆ ಮೂಲ ಸೌಕರ್ಯ ನೀಡಲಾಗುವುದು ಎಂದರು.
ದೇವಸ್ಥಾನ ಕಮಿಟಿ ಅಧ್ಯಕ್ಷ ಕೆ.ಎಚ್.ವೀರನಗೌಡ, ಪ್ರಮುಖರಾದ ಹಿ.ಮ.ಚಿದಾನಂದ ಸ್ವಾಮಿ, ಜೋಯಿಸ್ ಹಯವಧನಚಾರ್, ಸಣ್ಣ ಕೊತ್ಲಪ್ಪ, ಉದಯ ಜನ್ನು, ಬಣಕಾರ ಮಂಜುನಾಥ, ಟಿ.ಜಿ.ಮಲ್ಲಿಕಾರ್ಜುನ ಗೌಡ, ಸಿ.ಬಿ.ಜಯರಾಂ ನಾಯಕ, ಎಸ್.ಸುರೇಶ್, ಢಾಣಿ ರಾಘವೇಂದ್ರ, ಢಾಣಿ ಚೌಡಮ್ಮ, ಶೆಟ್ರು ಬಸವರಾಜ, ಅರ್ಚಕ ನಾಗರಾಜ ಇತರರಿದ್ದರು.