ಉಮಾದೇವಿ 
ಬಳ್ಳಾರಿ

ಪರೀಕ್ಷೆಯಲ್ಲಿ ಪಾರದರ್ಶಕ ಕಾಪಾಡಲು ಕ್ರಮ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಫಲಿತಾಂಶ
  • ಸುಧಾರಣೆಗೆ
  • ಕ್ರಮ
ಕಂಪ್ಲಿ: ಜಿಲ್ಲೆಯಲ್ಲಿ ಶಾಲೆ ಬಿಟ್ಟ 275 ಮಕ್ಕಳ ಪೈಕಿ 125 ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಲಾಗಿದೆ ಎಂದು ಡಿಡಿಪಿಐ ಉಮಾದೇವಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ಕ್ರಮವಹಿಸಲಾಗಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲ್ಲಿ ಜಿಲ್ಲೆ ರಾಜ್ಯದಲ್ಲಿ ಮೊದಲ 10ರಲ್ಲಿ ಒಂದು ಸ್ಥಾನಗಳಿಸುವ ಗುರಿ ಹೊಂದಲಾಗಿದೆ. ಮೊದಲ ಪೂರ್ವತಯಾರಿ ಪರೀಕ್ಷೆಯಲ್ಲಿ ಶೇ.49.24, ಎರಡನೇ ಪರೀಕ್ಷೆಯಲ್ಲಿ 64.05 ಫಲಿತಾಂಶ ಸಾಧಿಸಿದ್ದು, ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಲಾಗಿದೆ. ಮೂರನೇ ಪರೀಕ್ಷೆಯಲ್ಲಿ ಶೇ.90 ಫಲಿತಾಂಶ ಸಾಧಿಸುವ ಆಶಯವಿದೆ ಎಂದರು.
ಮೊದಲ ಪೂರ್ವ ತಯಾರಿ ಪರೀಕ್ಷೆಯಲ್ಲಿ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಪಡೆದ 49 ಶಾಲೆ, ಎರಡನೇ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ 29 ಶಾಲೆಗಳಿಗೆ ನೋಟಿಸ್ ನೀಡಿ ಫಲಿತಾಂಶ ಸುಧಾರಣೆಗೆ ಸೂಚಿಸಲಾಗಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಂಜೆ ತರಗತಿ ನಡೆಸಲಾಗುತ್ತಿದೆ. ಪರೀಕ್ಷೆಯಲ್ಲಿ ಪಾರದರ್ಶಕ ಕಾಪಾಡಲು ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು ಎಂದರು.