ಕೊಟ್ಟೂರು ಎಪಿಎಂಸಿಯಲ್ಲಿ ಆಯೋಜಿಸಿದ ಸಂಗೀತ ಮತ್ತು ನಾಟಕೋತ್ಸವದ ಕಾರ್ಯಕ್ರಮದಲ್ಲಿ ಸಂಸದ ಈ.ತುಕಾರಾಮ್ ಅವರನ್ನು ಸನ್ಮಾನಿಸಲಾಯಿತು. ಯೋಗಿರಾಜೇಂದ್ರ ಸ್ವಾಮೀಜಿ, ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ, ಎಪಿಎಂಸಿ ಉಪಾಧ್ಯಕ್ಷ ಎಂ.ಶಿವಣ್ಣ, ತಹಸೀಲ್ದಾರ್ ಅಮರೇಶ ಜಿ.ಕೆ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ ದಾರುಕೇಶ, ಎಪಿಎಂಸಿ ಅಧ್ಯಕ್ಷ ಹರಾಳ ನಂಜಪ್ಪ, ಪ್ರಮುಖರಾಧ ಎಂಎಂಜೆ ಸತ್ಯಪ್ರಕಾಶ, ಅಡಕಿ ಮಂಜುನಾಥ, ಅಂಚೆ ಇಲಾಖೆ ಕೊಟ್ರೇಶ ಇತರರಿದ್ದರು. 
ಬಳ್ಳಾರಿ

ಕಲಾ ಕೇಂದ್ರಕ್ಕೆ ಪರಿಕರ ವಿತರಿಸಲು ಕ್ರಮ

ಪ್ರಮುಖ ಮುಖ್ಯಾಂಶಗಳು

  • ಸಂಗೀತ
  • ನಾಟಕೋತ್ಸವ
  • ಕಾರ್ಯಕ್ರಮ
ಕೊಟ್ಟೂರು: ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ತಾಲೂಕಿನ ಹಲವಾರು ಶಾಲೆಗಳಿಗೆ ತಲಾ 1ಲಕ್ಷ ರೂ. ಮೌಲ್ಯದ ಕ್ರೀಡಾ ಉಪಕರಣಗಳನ್ನು ನೀಡಲಾಗಿದೆ ಎಂದು ಸಂಸದ ಈ ತುಕಾರಾಮ್ ಹೇಳಿದರು.
ಪಟ್ಟಣದ ಎಪಿಎಂಸಿಯಲ್ಲಿ ಕಲಾ ಕೇಂದ್ರದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಂಗೀತ ಮತ್ತು ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊಟ್ಟೂರು ಸಾಂಸ್ಕೃತಿಕ ಕಲೆಗಳನ್ನು ಬೆಂಬಲಿಸಿ ಪ್ರೋತ್ಸಾಹಿಸಿದ ಕಲಾಭಿಮಾನಿಗಳ ಸ್ಥಳವಾಗಿದೆ. ಎಂಎಂಜೆ ಸತ್ಯ ಪ್ರಕಾಶ ಸಾಂಸೃ ್ಕತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಳೆದ 4ದಶಕಗಳಿಂದ ಅನೇಕ ಕಲಾವಿದರನ್ನು ಪ್ರೋತ್ಸಾಹಿಸಿದ್ದಾರೆ. ಕಲಾ ಕೇಂದ್ರಕ್ಕೆ ಪರಿಕರಗಳನ್ನು ಕೊಡಿಸುವುದುದಾಗಿ ಭರವಸೆ ನೀಡಿದರು.
ವೈದ್ಯ ಬಿ.ಸಿ.ಮೂಗಪ್ಪ ಮಾತನಾಡಿ, ಈ ಭಾಗದಲ್ಲಿ ಬಹುತೇಕ ರಸ್ತೆಗಳು ಹಾಳಾಗಿದ್ದು ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಸರಿಯಾದ ಚರಂಡಿಗಳಿಲ್ಲದೆ ಎಲ್ಲೆಂದರಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳಿಂದ ಜನರು ಆಸ್ಪತ್ರೆಗೆ ಸೇರುವಂತಾಗಿದೆ. ಸಂಸದರು ಕ್ಷೇತ್ರದಲ್ಲಿನ ರಸ್ತೆ, ಚರಂಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದರು.
ತಾಲೂಕು ಕಲಾಕೇಂದ್ರದ ಅಧ್ಯಕ್ಷ ಎಂಎಂಜೆ ಸತ್ಯಪ್ರಕಾಶ ಮಾತನಾಡಿ, ಪಟ್ಟಣದಲ್ಲಿ ಸುಮಾರ 150ಕ್ಕೂ ಹೆಚ್ಚು ಉದ್ಯಾನಗಳಿದ್ದು, ಒಂದನ್ನು ಸಾಂಸ್ಕೃತಿ ಚಟುವಟಿಕೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಸಾಣೆಹಳ್ಳಿಯ ಶಿವಸಂಚಾರ ತಂಡದಿಂದ ‘ಕಳ್ಳರ ಸಂತೆ’ ನಾಟಕ ಪ್ರದರ್ಶಿಸಲಾಯಿತು.