ಸಿರಗುಪ್ಪದಲ್ಲಿ ಬಾಳೆ ದಿಂಡಿನ ಅಲಂಕಾರದಲ್ಲಿ ಕಂಗೊಳಿಸುವ ಅಯ್ಯಪ್ಪ ಸ್ವಾಮಿ ವಿಗ್ರಹ
ಸಿರಗುಪ್ಪ: ಪಟ್ಟಣದ ಹಳೇ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಹಾ ಮಂಡಲ ಪೂಜೆಯ ಅಂಗವಾಗಿ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಗಣಪತಿ ಪೂಜೆ, ಕಳಸ ವರ್ಣ ಪೂಜೆ, ಸ್ವಸ್ತಿಪುಣ್ಯ ವಾಚನ, ಮಹಾ ಗಣಪತಿ ಹೋಮ ನಡೆಯಿತು. ದೇವಸ್ಥಾನದಲ್ಲಿನ ವಿನಾಯಕ, ದತ್ತಾತ್ರೇಯ, ಅನ್ನಪೂರ್ಣೇಶ್ವರಿ, ಸುಬ್ರಹ್ಮಣ್ಯ ಸ್ವಾಮಿ, ಹನುಮಂತ, ಮಹಾಲಕ್ಷ್ಮೀ ದೇವಿ, ಸಾಯಿಬಾಬ, ಈಶ್ವರ, ಲಕ್ಷ್ಮೀ ವೆಂಕಟೇಶ್ವರ, ಸೀತಾರಾಮ ಹಾಗೂ ಸತ್ಯನಾರಾಯಣ, ನವಗ್ರಹಗಳಿಗೆ ಅಭಿಷೇಕ, ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ಪೂರ್ಣ ಆಹುತಿ ಹೋಮ ಜರುಗಿತು. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಒಂದು ಲಕ್ಷ ಅರ್ಚನೆ ಸಲ್ಲಿಸಿದರು.
ಅಯ್ಯಪ್ಪ ಸ್ವಾಮಿ ಮೂರ್ತಿಗೆ ವಿಶೇಷ ಪಂಚಾಮೃತ ಅಭಿಷೇಕ, ವಿಶೇಷ ಪುಷ್ಪ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದಲ್ಲಿ ಬಾಳೆ ದಿಂಡಿನಿಂದ ಮಂಟಪ ನಿರ್ಮಿಸಿ ಅಯ್ಯಪ್ಪ ಸ್ವಾಮಿ ವಿಗ್ರಹ ಪ್ರತಿಷ್ಠಾಪಿಸಿ, ತುಳಸಿ ಹಾಗೂ ವಿವಿಧ ಹೂಗಳ ಮಾಲೆ ಹಾಕಿ ಅಲಂಕರಿಸಲಾಗಿತ್ತು.