ಬಳ್ಳಾರಿಯ ರೈತ ಭವನದಲ್ಲಿ ಹುಟ್ಟುಹಬ್ಬದ ಅಂಗವಾಗಿ ತಯಾರಿಸಿದ ವಿಶೇಷ ಸಿಹಿ ಖಾದ್ಯವನ್ನು ಬಗರ್ ಹುಕಂ ಸಮಿತಿ ಅಧ್ಯಕ್ಷ ಎಚ್.ತಿಮ್ಮನಗೌಡ ರೈತರಿಗೆ ನೀಡಿದರು. ಬಿಡಿಸಿಸಿ ಅಧ್ಯಕ್ಷ ಅವ್ವಾರು ಮಂಜುನಾಥ, ಪದಾಧಿಕಾರಿಗಳಾದ ಕೆ.ಸಿ.ಸುರೇಶಬಾಬು, ತಿಮ್ಮಪ್ಪ, ಚಿದಾನಂದಪ್ಪ, ಮಹೇಶ್ ಇತರರಿದ್ದರು.
- ನೂರಾರು ರೈತರಿಗೆ ಉಚಿತ
- ಗುಣಮಟ್ಟದ ಆಹಾರ
ಬಳ್ಳಾರಿ : ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಗರ್ ಹುಕಂ ಸಮಿತಿ ಅಧ್ಯಕ್ಷ ಎಚ್.ತಿಮ್ಮನಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ಇಲ್ಲಿನ ಎಪಿಎಂಸಿ ಆವರಣದ ರೈತ ಭವನದಲ್ಲಿ ಬಿಡಿಸಿಸಿ ಆಶ್ರಯದಲ್ಲಿ ನಡೆಯುವ ರೈತಣ್ಣನ ಊಟ ಯೋಜನೆಯಡಿ ವಿಶೇಷ ಸಿಹಿ ಖಾದ್ಯ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
ರೈತ ಭವನಕ್ಕೆ ಆಗಮಿಸಿದ ರೈತರು ಹಾಗೂ ಸಾರ್ವಜನಿಕರು ಎಚ. ತಿಮ್ಮನಗೌಡ ಅವರ ಈ ಸೇವಾ ಮನೋಭಾವವನ್ನು ಶ್ಲಾಘಿಸಿದರು. ರೈತಣ್ಣನ ಊಟ ಯೋಜನೆಯ ಮೂಲಕ ಪ್ರತಿದಿನ ನೂರಾರು ರೈತರಿಗೆ ಉಚಿತ ಹಾಗೂ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದ್ದು, ಈ ಯೋಜನೆಗೆ ವಿವಿಧ ದಾನಿಗಳು ಮತ್ತು ಸಮಾಜಸೇವಕರು ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ. ಅದರಂತೆ ಎಚ್.ತಿಮ್ಮನಗೌಡ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಊಟದ ಸಂಪೂರ್ಣ ವೆಚ್ಚ ವಹಿಸಿಕೊಂಡು ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿದರು.