ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ.ಚನ್ನಪ್ಪ, ಅಧ್ಯಕ್ಷ ಕೆ.ಕೋಟೇಶ್ವರ ರಾವ್, ಉಪಾಧ್ಯಕ್ಷ ಎಚ್. ವಿಷ್ಣುವರ್ಧನರೆಡ್ಡಿ, ಪದಾಧಿಕಾರಿಗಳಾದ ರಮಣಪ್ಪ ಭಜಂತ್ರಿ, ಜಿ.ಆರ್.ವೆಂಕಟೇಶಲು ಇತರರರಿದ್ದರು. === 
ಬಳ್ಳಾರಿ

ನಾಟಕದಿಂದ ಸಮಾಜ ಬದಲಾವಣೆ

ಪ್ರಮುಖ ಮುಖ್ಯಾಂಶಗಳು

  • ಸಮಾಜ
ಬಳ್ಳಾರಿ : ಬಳ್ಳಾರಿ ರಾಘವ ಅವರು ನಾಟಕ ಕಲೆಯ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾನಟ ಎಂದು ನಿವೃತ್ತ ಉಪನ್ಯಾಸಕ ಎನ್.ಬಸವರಾಜ್ ಹೇಳಿದರು.
ನಗರದ ರಾಘವ ಕಲಾಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವ ಅವರ 80ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಟಕಗಳು ಸಮಾಜದಲ್ಲಿ ಬದಲಾವಣೆ ತರಬೇಕು ಎಂಬುದಾಗಿ ಪ್ರತಿಪಾದಿಸಿದವರು. ರಾಘವ ಅವರು ಖ್ಯಾತ ವಕೀಲರಾಗಿ ಸೇವೆ ಸಲ್ಲಿಸುತ್ತಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲೀಷ್ ಐದು ಭಾಷೆಗಳಲ್ಲಿ ನಾಟಕಗಳು ಪ್ರದರ್ಶಿಸಿ ಖ್ಯಾತ ಗಣ್ಯರಿಂದ ಮೆಚ್ಚುಗೆ ಪಡೆದಿದ್ದರು ಎಂದರು.
ಬಳಿಕ ರಂಗಲೋಕ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಸಾರಿ ನೇಲ್ಕು ದುರಿ ತಂಡದಿಂದ ರೈತರ ಧ್ವನಿ ನಾಟಕ ಪ್ರದರ್ಶಿಸಲಾಯಿತು.