ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ಕೌಶಲಾಧಾರಿತ ಸರಣಿ ಕಾರ್ಯಾಗಾರಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಸಮಾಜ ಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಕೆ.ಜಿ.ಸುಮಾ ಚಾಲನೆ ನೀಡಿದರು. ಕೇಂದ್ರದ ಪ್ರಭಾರ ನಿರ್ದೇಶಕ ಡಾ.ವಿ.ಚೌಡಪ್ಪ, ಸಂಯೋಜಕ ಲಕ್ಷ್ಮಣ ತೋಳಿ, ಉಪನ್ಯಾಸಕರಾದ ಡಾ.ಜಿ.ಹನುಮಂತಪ್ಪ, ಡಾ.ಎಸ್.ಹೊನ್ನೂರಪ್ಪ ಇತರರಿದ್ದರು.  
ಬಳ್ಳಾರಿ

ಪದವಿಯೊಂದಿಗೆ ಕೌಶಲವೂ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಸ್ನ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ವಿ.ಚೌಡಪ್ಪ ಅನಿಸಿಕೆ
  • ಸಂಡೂರು ಕೌಶಲಾಧಾರಿತ ಸರಣಿ ಕಾರ್ಯಾಗಾರ
ಸಂಡೂರು: ಸೈದ್ಧಾಂತಿಕ ಶಿಕ್ಷಣದ ಜತೆಗೆ ಪ್ರಾಯೋಗಿಕ ಜ್ಞಾನ ಮತ್ತು ಕೌಶಲಗಳನ್ನು ವಿದ್ಯಾರ್ಥಿಗಳಿಗೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕ ಡಾ.ವಿ.ಚೌಡಪ್ಪ ಹೇಳಿದರು.
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಸಮಾಜಕಾರ್ಯ ಅಧ್ಯಯನ ವಿಭಾಗದದಿಂದ ಆಯೋಜಿಸಿದ್ದ ವಿಭಾಗ ಮಟ್ಟದ ಆರು ದಿನಗಳ ವಿಶೇಷ ಕೌಶಲಾಧಾರಿತ ಸರಣಿ ಕಾರ್ಯಾಗಾರಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕ ಹಾಗೂ ಕೃತಕ ಬುದ್ಧಿಮತ್ತೆ ಯುಗದಲ್ಲಿ ಪದವಿ ಹೊಂದಿದರೆ ಸಾಕಾಗುವುದಿಲ್ಲ. ವಿದ್ಯಾರ್ಥಿಗಳು ಉದ್ಯೋಗ ಮತ್ತು ವೃತ್ತಿ ಜೀವನಕ್ಕೆ ಕಾಲಿಡುವ ಸಂದರ್ಭದಲ್ಲಿ ಅಗತ್ಯವಿರುವ ವಿವಿಧ ಕೌಶಲಗಳನ್ನು ಕಲಿಯಬೇಕಿದೆ ಎಂದರು.
ಸಮಾಜ ಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಕೆ.ಜಿ.ಸುಮಾ ಮಾತನಾಡಿ, ಜೂ.20 ರವರೆಗೆ ನಡೆಯಲಿರುವ ಸರಣಿ ಕಾರ್ಯಾಗಾರಗಳಲ್ಲಿ ಸಂದರ್ಶನ ಎದುರಿಸುವ ಕೌಶಲ, ರೆಸ್ಯೂಮ್ ತಯಾರಿಕೆ, ಪರಿಣಾಮಕಾರಿ ಸಂವಹನ ಕೌಶಲ, ತಂಡ ಕಾರ್ಯನಿರ್ವಹಣೆ, ವೃತ್ತಿ ಕೌಶಲಗಳು, ಕೃತಕ ಬುದ್ಧಿಮತ್ತೆಯ ಬಳಕೆ, ಡಿಜಿಟಲ್ ಕೌಶಲಗಳು ಸೇರಿದಂತೆ 25ಕ್ಕೂ ಹೆಚ್ಚು ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.
ಕಾರ್ಯಕ್ರಮದ ಸಂಯೋಜಕ ಲಕ್ಷ್ಮಣ ತೋಳಿ, ಉಪನ್ಯಾಸಕರಾದ ಡಾ.ಜಿ.ಹನುಮಂತಪ್ಪ, ಡಾ.ಎಸ್.ಹೊನ್ನೂರಪ್ಪ, ಸಮಾಜ ಕಾರ್ಯ ಅಧ್ಯಯನ ವಿಭಾಗದ ಸ್ನಾತಕೋತ್ತರ, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಇದ್ದರು.