ವರದಿ ಸಲ್ಲಿಕೆಗೆ ಆರು ವಾರ ಗಡುವು 
ಬಳ್ಳಾರಿ

ವರದಿ ಸಲ್ಲಿಕೆಗೆ ಆರು ವಾರ ಗಡುವು

ಪ್ರಮುಖ ಮುಖ್ಯಾಂಶಗಳು

  • ವರದಿ
ಬಳ್ಳಾರಿ : ಆಂಧ್ರ-ಕರ್ನಾಟಕ ಗಡಿಭಾಗದಲ್ಲಿ ಗಣಿಗಾರಿಕೆ ಹೆಸರಿನಲ್ಲಿ ನಡೆದಿರುವ ಭೂಮಿ ಒತ್ತುವರಿ ಪ್ರಕರಣ ಸಂಬಂಧ ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಧಾಂಶ ದುಲಿಯಾ ನೇತೃತ್ವದಲ್ಲಿ ರಚಿಸಲಾದ ಸಮಿತಿಯೂ ತನ್ನ ವರದಿಯಲ್ಲಿ ನಾಲ್ಕು ಅಂಶಗಳನ್ನು ಸ್ಪಷ್ಟಪಡಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್‌ನ ಸಿಜೆಐ ಸೂರ್ಯಕಾಂತ್ ಆದೇಶಿಸಿದ್ದಾರೆ.
ಗಣಿಗಾರಿಕೆ ಅನುಮತಿ ಪಡೆದ ಸಂಸ್ಥೆಗಳು ಮೀಸಲು ಅರಣ್ಯವನ್ನು ಅತಿಕ್ರಮಿಸಿವೆಯೇ ?. ಅಕ್ರಮ ಗಣಿಗಾರಿಕೆ ಮತ್ತು ಇತರ ಅನಧಿಕೃತ ಚಟುವಟಿಕೆಗಳ ತೀವ್ರತೆ ಎಷ್ಟಿದೆ ? . ಅಕ್ರಮ ಗಣಿಗಾರಿಕೆಯಿಂದ ಸರ್ಕಾರಿ ಬೊಕ್ಕಸಕ್ಕೆ ಎಷ್ಟು ಸಂಭವಿಸಿದೆ ಈ ಪ್ರಮುಖ ಅಂಶಗಳನ್ನು ಸ್ಪಷ್ಟಪಡಿಸಿ ವರದಿ ಸಲ್ಲಿಸಬೇಕು ಎಂಬುದಾಗಿ ಆದೇಶಿಸಿದೆ.
ಕರ್ನಾಟಕ ಸಮಾಜ ಪರಿವರ್ತನಾ ಸಮುದಾಯದ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿ, ಅಂತರಾಜ್ಯ ಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ ಮತ್ತು ಆರು ಗಣಿ ಗುತ್ತಿಗೆ ಪಡೆದ ಸಂಸ್ಥೆಗಳು ಬೆಟ್ಟಗಳು ಹಾಗೂ ದೇವಸ್ಥಾನವನ್ನು ಅಕ್ರಮ ಗಣಿಗಾರಿಕೆಯಿಂದ ಧ್ವಂಸಗೊಳಿಸಿದ್ದಾರೆ ಎಂಬುದಾಗಿ ನ್ಯಾಯಪೀಠಕ್ಕೆ ಗಮನ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ‘ ಕಳೆದ ಹನ್ನೊಂದು ವರ್ಷಗಳಿಂದ ಏನನ್ನೂ ಮಾಡದ ಸಿಬಿಐನಿಂದ ನಾವು ಈಗ ಏನನ್ನು ನಿರೀಕ್ಷಿಸಲು ಸಾಧ್ಯ ? ನಿ.ನ್ಯಾಯಮೂರ್ತಿ ಸುಧಾಂಶ ದುಲಿಯಾ ಸಮಿತಿಯೂ ಗಡಿ ಮೀರಿ ಗಣಿಗಾರಿಕೆ ನಡೆದಿದೆ ಎಂದು ವರದಿ ನೀಡಿದರೆ ಸಿಬಿಐ ತನಿಖೆಯನ್ನು ಮತ್ತೆ ಪ್ರಾರಂಭಿಸಬಹುದ ಎಂದು ತಿಳಿಸಿದರು. ಸಮಿತಿಯೂ ಕೇಳಿದ ಆರು ವಾರಗಳ ಕಾಲಾವಕಾಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಏನಿದು ವಿವಾದ : ಅಕ್ರಮ ಗಣಿಗಾರಿಕೆ ಹಾಗೂ ಗಡಿ ಒತ್ತುವರಿ ಆರೋಪದಡಿ ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿ ಅಂತರಗಂಗಮ್ಮ ಗುಡ್ಡದಲ್ಲಿ ನಿ.ನ್ಯಾಯಮೂರ್ತಿ ಸುಪ್ರಿಂ ಕೋರ್ಟ್ ನಿ.ನ್ಯಾಯಾಧೀಶ ಸುಧಾಂಶ ಧುಲಿಯಾ ನೇತೃತ್ವದ ಸಮಿತಿಯೂ ಡಿ.10 ರಂದು ಭೇಟಿ ನೀಡಿ ಡ್ರೋನ್ ಮೂಲಕ ಸರ್ವೇ ನಡೆಸಿತ್ತು. ಇದರಲ್ಲಿ ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್, ಸಿದ್ದಾಪುರದಲ್ಲಿನ ಬಿಐಒಸಿ ಕಂಪನಿಯ 27.12 ಹೆಕ್ಟೇರ್, ವೈ. ಮಹಾಬಲೇಶ್ವರಪ್ಪ ಸನ್ಸ್ ಹೆಸರಿನ 20.24 ಹೆಕ್ಟೇರ್, ಒಬಳಾಪುರಂ ಗ್ರಾಮದಲ್ಲಿ ಒಎಂಸಿ ಹೆಸರಿನ 25.98 ಹೆಕ್ಟೇರ್, ಒಎಂಸಿ2 ಹೆಸರಿನ 39.50 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿ ಗುತ್ತಿಗೆ ಸಂಬಂಧ ಎರಡು ಹಂತಗಳಲ್ಲಿ ಸರ್ವೇ ವೇಳೆ ಒತ್ತುವರಿ ಬೆಳಕಿಗೆ ಬಂದಿದೆ. ಸರ್ವೇಯಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಒಡೆತನದ ಒಎಂಸಿ 2 ಹೆಸರಿನ 39.50 ಹೆಕ್ಟೇರ್ ಹಾಗೂ ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿ ಗುತ್ತಿಗೆ ಪ್ರದೇಶ ಮತ್ತು ಗಡಿಗಳು ಹೊಂದಾಣಿಕೆಯಾಗುತ್ತಿಲ್ಲ. ಈ ಕಂಪನಿಗಳು ಕರ್ನಾಟಕ ರಾಜ್ಯದಲ್ಲಿ ಅತಿಕ್ರಮೇಣ ಮಾಡಿವೆ ಎಂಬುದಾಗಿ ವರದಿ ನೀಡಿದ್ದವು.
====