ಬಳ್ಳಾರಿಯ ಮರಿಸ್ವಾಮಿ ಮಠದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮುದಾಯ ಭವನ ನಿರ್ಮಿಸಲು ನಿವೇಶನ ನೋಂದಣಿ ಪತ್ರವನ್ನು ಸಂಘದ ಜಿಲ್ಲಾಧ್ಯಕ್ಷ ಡಾ.ಶಂಕರ್ ಜಿರಂಕಳಿ ಅವರಿಗೆ ಸದಸ್ಯರು ಹಸ್ತಾಂತರಿಸಿದರು. ಪದಾಧಿಕಾರಿಗಳಾದ ಡಾ.ದೇವರಾಜ್ ಇಸ್ಲೂರು, ಜವಳಿ ಬಾಬಣ್ಣ, ಸುರೇಶ್ ನಾಗಲೀಕರ, ಜಡೆ ಮರೆಣ್ಣ, ವೀರೇಶ, ಉಮಾಪತಿ, ಕೊಂಪಿ ಪ್ರಕಾಶ, ಜವಳಿ ಶಿವಕುಮಾರ ಇತರರಿದ್ದರು. 
ಬಳ್ಳಾರಿ

ನಿವೇಶನ ನೋಂದಣಿ ಪ್ರಕ್ರಿಯೆ ಪೂರ್ಣ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಕಾರ್ಯಕಾರಿ ಸಮಿತಿ ಸಭೆ
ಬಳ್ಳಾರಿ : ಚಿಪ್ಪಿಗ ಸಮಾಜದ ಸಮುದಾಯ ಭವನ ನಿರ್ಮಿಸಲು ನಾಗರಿಕ ಸೌಲಭ್ಯ ನಿವೇಶನ ನೋಂದಣಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಚಿಪ್ಪಿಗ ಸಮಾಜದ ಜಿಲ್ಲಾಧ್ಯಕ್ಷ ಡಾ.ಶಂಕರ ಜಿರಂಕಳಿ ಹೇಳಿದರು.
ನಗರದ ಮರಿಸ್ವಾಮಿ ಮಠದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಇದು ಚಿಪ್ಪಿಗ ಸಮಾಜದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲುಗಲ್ಲಾಗಿದ್ದು, ಸಮಾಜದ ಭವಿಷ್ಯದ ಬೆಳವಣಿಗೆಗೆ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಆಡಳಿತಾತ್ಮಕ ಕಾರ್ಯಗಳಿಗಾಗಿ ಸ್ವಂತ ನಿವೇಶನ ಭದ್ರ ಪಡಿಸಿಕೊಂಡಂತಾಗಿದೆ ಎಂದರು. ಸಮುದಾಯ ಭವನ ನಿರ್ಮಾಣಕ್ಕೆ ಹಣಕಾಸು ವ್ಯವಸ್ಥೆ, ದೇಣಿಗೆ ಸಂಗ್ರಹಣೆ, ಕಟ್ಟಡ ನಿರ್ಮಾಣ ಮತ್ತು ಮೂಲಸೌಕರ್ಯ ಒದಗಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಬಳಿಕ ಸಂಘದ ಉಪಸಮಿತಿ ರಚಿಸಲಾಯಿತು.
====