ಹಗರಿಬೊಮ್ಮನಹಳ್ಳಿ ಬಿಜೆಪಿ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹಾಗೂ ಪಕ್ಷದ ಸಂಘಟನಾತ್ಮಕ ಸಭೆಯಲ್ಲಿ ನಗರ ಘಟಕದ ಅಧ್ಯಕ್ಷ ಮಂಜುನಾಥ ಹಿರೇಮಠ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಿಯಮ್ಮನಹಳ್ಳಿ ಕೃಷ್ಣನಾಯ್ಕ, ಎಸ್ಟಿ ಮೋರ್ಚಾ ಉಪಾಧ್ಯಕ್ಷ ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಜೋಗಿ ಹನುಮಂತಪ್ಪ, ಪುರಸಭೆ ಸದಸ್ಯ ಪಿ.ನವೀನ್ ಇದ್ದರು.
- ಬಿಜೆಪಿ ನಗರ ಅಧ್ಯಕ್ಷ ಮಂಜುನಾಥ ಅಭಿಮತ
- ಹಗರಿಬೊಮ್ಮನಹಳ್ಳಿ ಮತದಾರರ ಪಟ್ಟಿವಿಶೇಷ ಪರಿಷ್ಕರಣೆ ಸಭೆ
ಹಗರಿಬೊಮ್ಮನಹಳ್ಳಿ: ಶುದ್ಧ ಮತದಾನಕ್ಕೆ ಎಸ್‌ಐಆರ್ ಸೂಕ್ತವಾಗಿದೆ. ಎಸ್‌ಐಆರ್ ಕುರಿತು ಕಾಂಗ್ರೆಸ್ ಜನರಲ್ಲಿ ಭಿನ್ನಾಭಿಪ್ರಾಯ ಮೂಡಿಸಲು ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಮಂಜುನಾಥ ಹಿರೇಮಠ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹಾಗೂ ಪಕ್ಷ ಸಂಘಟನಾತ್ಮಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರಂಭದಲ್ಲಿ ನೂರೆಂಟು ವಿಘ್ನಗಳು ಬಂದರೂ ಮುಂದೆ ಎಸ್‌ಐಆರ್ ಯಶಸ್ವಿಯಾಗಲಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಿಯಮ್ಮನಹಳ್ಳಿ ಕೃಷ್ಣನಾಯ್ಕ, ಎಸ್ಟಿ ಮೋರ್ಚಾ ಉಪಾಧ್ಯಕ್ಷ ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಜೋಗಿ ಹನುಮಂತಪ್ಪ, ಪುರಸಭೆ ಸದಸ್ಯ ಪಿ.ನವೀನ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕೋಗಳಿ ಹನುಮಂತಪ್ಪ, ದಿವಾಕರ್, ನಗರ ಘಟಕದ ಪದಾಧಿಕಾರಿಗಳಾದ ಮಲ್ಲಯ್ಯ, ಜಿ.ಕಾಳೇಶ್, ಮತ್ತಿಹಳ್ಳಿ ಮಂಜುನಾಥ, ಶಿವಯೋಗಿ, ಸುರೇಶ್, ಗೊಣಿಬಸಪ್ಪ, ಹಾಲೇಶ್, ಬಿಎಲ್‌ಎಗಳಿದ್ದರು.