ಗೋರ್ಕಲ್ ಗ್ರಾಮದಲ್ಲಿ ಸೋಮವಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಮುಖ್ಯಶಿಕ್ಷಕ ರಮೇಶ ಕುರ್ಡಿ, ಸಹಶಿಕ್ಷಕ ವೆಂಕಟೇಶ್, ಗುರುಬಸನಾಯಕ, ಸುರೇಶ ಇದ್ದರು. 
ಬಳ್ಳಾರಿ

ಗೋರ್ಕಲ್‌ನಲ್ಲಿ ಎಸ್‌ಐಆರ್ ಜಾಗೃತಿ ಜಾಥಾ

ಪ್ರಮುಖ ಮುಖ್ಯಾಂಶಗಳು

  • ಮಾದರಿ
  • ಹಿರಿಯ
  • ಪ್ರಾಥಮಿಕ ಶಾಲೆ
ಮಾನ್ವಿ: ಯುವ ಮತದಾರರು ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ವಿಶೇಷ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮುಖ್ಯಶಿಕ್ಷಕ ರಮೇಶ ಕುರ್ಡಿ ಹೇಳಿದರು.
ಗೋರ್ಕಲ್ ಗ್ರಾಮದಲ್ಲಿ ಸೋಮವಾರ ಗ್ರಾಪಂ ಹಾಗೂ ಸರ್ಕಾರಿ ಉನ್ನತೀಕರಿಸಿದ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಏರ್ಪಡಿಸಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
ಬಳಿಕ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಸಂಚರಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು, ತಿದ್ದುಪಡಿ ಹಾಗೂ ಹೆಸರು ಕೈ ಬಿಡುವಿಕೆಗೆ ಸಂಬಂಧಿಸಿದಂತೆ ಆಯಾ ಬೂತ್ ಮಟ್ಟದ ಬಿಎಲ್‌ಒ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಾಗೃತಿ ಮೂಡಿಸಿದರು.
ಗ್ರಾಪಂ ಕಾರ್ಯದರ್ಶಿ ಆಂಜನೇಯ ನಾಯಕ, ಸಹಶಿಕ್ಷಕ ವೆಂಕಟೇಶ್, ಗುರುಬಸನಾಯಕ, ಸುರೇಶ, ಸಿಂಧುಕುಮಾರಿ ಇತರರಿದ್ದರು.