ನಡವಿ ಗ್ರಾಮದಲ್ಲಿ ಸಿರಿಗೇರಿ ಧಾತ್ರಿ ರಂಗ ಸಂಸ್ಥೆಯಿಂದ ಆಯೋಜಿಸಿದ್ದ ಮುಂಗಾರು ರಂಗೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ಕಾಳಿಂಗಪ್ಪ ಚಾಲನೆ ನೀಡಿದರು.
ಸಿರಿಗೇರಿ: ನಡವಿ ಗ್ರಾಮದಲ್ಲಿ ಧಾತ್ರಿ ರಂಗಸಂಸ್ಥೆಯಿಂದ ಮುಂಗಾರು ರಂಗೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಬುಧವಾರ ನಡೆಯಿತು.
ಶ್ರುತಿ ತಿಪಟೂರು ಧಾತ್ರಿ ರಂಗಸಂಸ್ಥೆಗಾಗಿ ನಿರ್ದೇಶನ ಮಾಡಿದ ಸೈಲೆನ್ಸ್ ಇಂಟರಪ್ಟೆಡ್ ನಾಟಕ ಪ್ರದರ್ಶನ ಮಾಡಿದರು. ನಂತರ ವಿದ್ಯಾರ್ಥಿಗಳು ನಾಟಕದ ಕುರಿತು ಅಭಿಪ್ರಾಯ ಮತ್ತು ನಾಟಕಗಳ ಮೂಲಕ ಕಲಿತ ಅನುಭವಗಳನ್ನು ಹಂಚಿಕೊಂಡರು.
ಅತಿಥಿಗಳು ನಾಟಕ ಮತ್ತು ಧಾತ್ರಿ ರಂಗ ಸಂಸ್ಥೆ, ರಂಗ ಚಟುವಟಿಕೆಗಳ ಕುರಿತು ಮಾತನಾಡಿದರು. ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ಕಾಳಿಂಗಪ್ಪ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ಕರಿಬಸಪ್ಪ, ಸಿರಗುಪ್ಪ ನೆಹರಂಗ ತಂಡದ ಮುಖ್ಯಸ್ಥ ಸದಾಶಿವ, ನಾಟಕ ನಿರ್ದೇಶಕ ಮಹಾಂತೇಶ್ ರಾಮದುರ್ಗ, ರಂಗ ಪದವೀಧರರಾದ ಶಂಕರ್ ಮೆಟ್ರಿ ಇದ್ದರು.