ಸಿರಿಗೇರಿಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು. ದಲಿತ ವಿದ್ಯಾರ್ಥಿ ಒಕ್ಕೂಟ ರಾಜ್ಯ ಸಂಚಾಲಕ ಎಚ್.ತಿಪ್ಪೇಸ್ವಾಮಿ, ಪ್ರಮುಖರಾದ ಬಳ್ಳಾರಿ ಈರೇಶ್, ಬಸವರಾಜ, ಮಂಜು, ನಾಗರಾಜ, ವಕೀಲ ಶೇಖಪ್ಪ, ಶೇಷಗಿರಿ, ವೀರೇಶ್, ಗೋಪಾಲ, ಹುಲೇಶ, ಶಿವ, ದೇವರಾಜ ಇತರರಿದ್ದರು. 
ಬಳ್ಳಾರಿ

ಪತಿಯಿಂದಲೇ ವಿದ್ಯೆ ಕಲಿತು ಶಾಲೆ ಆರಂಭ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಸಾವಿತ್ರಿಬಾಯಿ ಫುಲೆ
  • ಜಯಂತಿ

ಪತಿಯಿಂದಲೇ ವಿದ್ಯೆ ಕಲಿತು ಶಾಲೆ ಆರಂಭ

ಸಿರಿಗೇರಿ: ಸಾವಿತ್ರಿಬಾಯಿ ಫುಲೆ ಅವರು ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರ ಶಿಕ್ಷಣ ಹಕ್ಕಿಗಾಗಿ ಹೋರಾಟ ಮಾಡಿ, ತಮ್ಮ ಪತಿಯಿಂದಲೇ ವಿದ್ಯೆ ಕಲಿತು 18 ಶಾಲೆಗಳನ್ನು ಆರಂಭಿಸಿ ಎಲ್ಲ ಸಮುದಾಯದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ಅಕ್ಷರ ತಾಯಿ ಎಂದು ದಲಿತ ವಿದ್ಯಾರ್ಥಿ ಒಕ್ಕೂಟ ರಾಜ್ಯ ಸಂಚಾಲಕ ಎಚ್.ತಿಪ್ಪೇಸ್ವಾಮಿ ಹೇಳಿದರು.
ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಗಿನ ಕಾಲದ ಪರಿಸ್ಥಿತಿಯಲ್ಲಿ ಗಂಡನ ಮರಣದ ನಂತರ ಸತಿ ಸಹಗಮನ ಪದ್ಧತಿ, ಸಮಾಜದಿಂದ ಬಹಿಷ್ಕಾರ, ಕೇಶ ಮುಂಡನೆಗೆ ಒಳಗಾಗಿ ಮನೆಯಲ್ಲಿ ಇರಬೇಕಿತ್ತು. ಸಮಾಜ ಬಾಹಿರ ಮೂಡನಂಬಿಕೆಗಳನ್ನು ಹೊಡೆದೋಡಿಸಿ ಹೆಣ್ಣು ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿದ ಕೀರ್ತಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಎಂದರು.
ಪ್ರಮುಖರಾದ ಬಳ್ಳಾರಿ ಈರೇಶ್,ಬಸವರಾಜ, ಮಂಜು, ನಾಗರಾಜ, ವಕೀಲ ಶೇಖಪ್ಪ, ಶೇಷಗಿರಿ, ವೀರೇಶ್, ಗೋಪಾಲ, ಹುಲೇಶ, ಶಿವ, ದೇವರಾಜ ಇತರರಿದ್ದರು.