ಕಂಪ್ಲಿ ಕಲ್ಮಠ ಶ್ರೀ ಪ್ರಭುಸ್ವಾಮಿಗಳ ಅನುದಾನಿತ ಪ್ರೌಢಶಾಲೆ ಆವರಣದಲ್ಲಿ ಕಸಾಪ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮವನ್ನು ದತ್ತಿ ದಾನಿ ಮಹಾಂತಿನಮಠದ ಸುಮಂಗಳಮ್ಮ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ, ಶ್ರೀ ಗುರುಸಿದ್ದೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕ ರಾಘವೇಂದ್ರ, ದತ್ತಿದಾನಿ ಕಲ್ಗುಡಿ ವಿಜಯಕುಮಾರ್, ಶಿಕ್ಷಕಿ ರಾಜೇಶ್ವರಿ ಇತರರಿದ್ದರು. 
ಬಳ್ಳಾರಿ

ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶರಣರು

ಕಂಪ್ಲಿ: ಎಲ್ಲ ಕಾಯಕಗಳು ಸಮ ಮತ್ತು ಶ್ರೇಷ್ಠ ಎಂದು ಸಾರುವ ಮೂಲಕ ವಚನಕಾರರು ಸಮಾನತೆಯ ಕ್ರಾಂತಿಗೆ ನಾಂದಿ ಹಾಡಿದರು ಎಂದು ಶಿಕ್ಷಕಿ ರಾಜೇಶ್ವರಿ ಹೇಳಿದರು.
ಪಟ್ಟಣದ ಕಲ್ಮಠ ಶ್ರೀ ಪ್ರಭುಸ್ವಾಮಿಗಳ ಅನುದಾನಿತ ಪ್ರೌಢಶಾಲೆ ಆವರಣದಲ್ಲಿ ಕಸಾಪ ತಾಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿವಶರಣರು ಜಾತೀಯತೆ, ಲಿಂಗ ತಾರತಮ್ಯ, ಮೇಲು ಕೀಳು ಮನೋಭಾವ ಖಂಡಿಸಿ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು.
ಅನುಭವ ಮಂಪಟದ ಅಧ್ಯಕ್ಷರಾಗಿದ್ದ ಅಲ್ಲಮಪ್ರಭು ಅವರ ವಚನಗಳಲ್ಲಿ ತತ್ವಜ್ಞಾನ, ವೈಚಾರಿಕತೆ, ವೈರಾಗ್ಯ, ಅಂತರಂಗ ಶುದ್ಧಿ ಸೇರಿ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿದ್ದನ್ನು ಕಾಣಬಹುದು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ, ಶ್ರೀ ಗುರುಸಿದ್ದೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕ ರಾಘವೇಂದ್ರ, ದತ್ತಿ ದಾನಿಗಳಾದ ಮಹಾಂತಿನಮಠದ ಸುಮಂಗಳಮ್ಮ, ಕಲ್ಗುಡಿ ವಿಜಯಕುಮಾರ್, ಕಸಾಪ ಪದಾಧಿಕಾರಿಗಳಾದ ಹಾದಿಮನಿ ಕಾಳಿಂಗವರ್ಧನ, ಅಶೋಕ ಕುಕನೂರು, ಜಿ.ಪ್ರಕಾಶ, ಆಕಾಶ ಮಹಾಂತಿನಮಠ, ಶಿಕ್ಷಕರಾದ ಲೋಕೇಶ್, ಬೀರಲಿಂಗೇಶ ಇತರರಿದ್ದರು.