ಸಂಡೂರಿನ ಆದರ್ಶ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. 
ಬಳ್ಳಾರಿ

ಪುಸ್ತಕದ ಮೂಲಕ ಬದುಕು ರೂಪಿಸಿಕೊಳ್ಳಿ

ಸಂಡೂರು: ಬಸವಣ್ಣ ಹಾಗೂ ಅವರ ಅನುಯಾಯಿಗಳು ಕಾಯಕ ಮತ್ತು ದಾಸೋಹದ ಮೂಲಕ ಮಾನವೀಯ ಬದುಕನ್ನು ಸಾಗಿಸಿದರು ಎಂದು ಜಿ.ನಾಗಲಾಪುರದ ಗುರು ಒಪ್ಪತ್ತೇಶ್ವರಸ್ವಾಮಿ ಮಠದ ನಿರಂಜನ ಪ್ರಭುಸ್ವಾಮೀಜಿ ಹೇಳಿದರು.
ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಲಿಂಗಾಯತ ಸಂಘದಿಂದ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ, ಶಿವಶರಣ ಹರಳಯ್ಯ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಅಧೋಗತಿಗಿಳಿದಿವೆ ಎಂಬುದಕ್ಕೆ ಹೆಚ್ಚುತ್ತಿರುವ ವೃದ್ಧಾಶ್ರಮಗಳು ಸಾಕ್ಷಿಯಾಗುತ್ತಿವೆ. ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕೃತಿಯನ್ನು ಕಲಿಸಬೇಕು, ಅನಗತ್ಯವಾಗಿ ಮೊಬೈಲ್ ನೋಡುವ ಮೂಲಕ ಬದುಕನ್ನು ಹಾಳು ಮಾಡಿಕೊಳ್ಳುವ ಬದಲಿಗೆ ಪುಸ್ತಕ ಹಿಡಿದು ಬದುಕು ರೂಪಿಸಿಕೊಳ್ಳಬೇಕು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ವಿ.ಟಿ.ಕಾಳೆ, ಡಾ.ಬಿ.ನಾಗನಗೌಡ, ಡಾ.ನಿಷ್ಠಿ ರುದ್ರಪ್ಪ, ಕೆರನಳ್ಳಿ ಬಸಪ್ಪ, ಸಹಾಯಕ ಪ್ರಾಧ್ಯಾಪಕ ಡಾ.ತಿಪ್ಪೇರುದ್ರಪ್ಪ, ಡಾ.ಎಚ್.ಎಂ.ರೇವಣಸಿದ್ದಯ್ಯಸ್ವಾಮಿ, ಬಂಡ್ರಿ ಲಿಂಗಪ್ಪ, ಗುಡೇಕೋಟೆ ನಾಗರಾಜ, ಜಯಮ್ಮ, ಜಿ.ಆರ್.ರೇಖಮ್ಮ, ರಾಜಣ್ಣ, ಮಹ್ಮದ್ ಜಾವೀದ್, ಹಯಾದ್ ಬಾಷಾ, ಕೆ.ಟಿ.ಗುರುಪ್ರಸಾದ್ ಅವರನ್ನು ಗೌರವಿಸಲಾಯಿತು.
ಸಿರಿಗೇರಿಯ ಧಾತ್ರಿರಂಗ ಸಂಸ್ಥೆಯ ಕಲಾವಿದ ವಿ.ಸಿದ್ದರಾಮಣ್ಣ ಭಾಲ್ಕಿ ರಚಿಸಿದ ‘ಶಿವಶರಣ ಹರಳಯ್ಯ’ ನಾಟಕ ಆರ್.ಜಗದೀಶ ಜಾಣಿ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು. ತಾಲೂಕು ವೀರಶೈವ ಲಿಂಗಾಯತ ಸಂಘದ ಉಪಾಧ್ಯಕ್ಷ ಬಿ.ಜಿ.ಸಿದ್ದನಗೌಡ ಅಧ್ಯಕ್ಷತೆ ವಹಸಿದ್ದರು. ಗೌರವಾಧ್ಯಕ್ಷ ಬಂಡ್ರಿ ಪಿ.ರವಿಕುಮಾರ್, ಕಾರ್ಯದರ್ಶಿ ಟಿ.ಜಿ.ಸುರೇಶ್ ಗೌಡ, ನಿರ್ದೇಶಕ ಜಿ.ವಿರೇಶ್, ಸೋವೇನಹಳ್ಳಿ ಶಿವಮೂರ್ತಿ ಸ್ವಾಮಿ, ಅಕ್ಕನ ಬಳಗದ ಅಧ್ಯಕ್ಷೆ ಸರೋಜಮ್ಮ, ಜ್ಯೋತಿ ಪ್ರಕಾಶ್ ಇತರರಿದ್ದರು.