ಬಳ್ಳಾರಿಯ ಗುರುದೇವ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಶೂಶ್ರಕರ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಸರ್ಜನ್ ಡಾ.ಎನ್.ಬಸರೆಡ್ಡಿ ಉದ್ಘಾಟಿಸಿದರು. ವೈದ್ಯ ಡಾ. ಸೋಮೇಶ್ವರ ಎಫ್. ಗಡ್ಡಿ, ಜಿಲ್ಲಾಸ್ಪತ್ರೆಯ ಅಧೀಕ್ಷಕಿ ವೀಮಲಾಕ್ಷಿ , ಪ್ರೊ.ಶಿರಿಷಾ ಇದ್ದರು.
- ನರ್ಸಿಂಗ್ ಸೇವೆ ಚರಿತ್ರೆಯಲ್ಲಿ ಅಜರಾಮರಾ
- ಶೂಶ್ರುಕರು ಸಾಮಾಜಿಕ ಪರಿವರ್ತನೆಯ ಪ್ರತಿನಿಧಿ
ಬಳ್ಳಾರಿ : ನಿಸ್ವಾರ್ಥ ಸೇವೆ ಮತ್ತು ವೃತ್ತಿಪರ ಬದ್ಧತೆಗೆ ಹೆಸರಾದ ಶೂಶ್ರುಕರು ಸರ್ಕಾರದ ಪ್ರತಿಯೊಂದು ಆರೋಗ್ಯ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿ ರೋಗ ಮುಕ್ತ ಭಾರತ ನಿರ್ಮಾಣ ಮಾಡುವಲ್ಲಿ ಹಗಲಿರಳು ಶ್ರಮಿಸುತ್ತಿದ್ದಾರೆ ಎಂದು ಜಿಲ್ಲಾ ಸರ್ಜನ್ ಡಾ.ಎನ್.ಬಸರೆಡ್ಡಿ ನುಡಿದರು.
ನಗರದ ಗುರುದೇವ ನರ್ಸಿಂಗ್ ಕಾಲೇಜಿನಲ್ಲಿ ಪ್ಲೋರೆನ್ಸ್ ನೈಟಿಂಗಲ್ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಂತರಾಷ್ಟ್ರೀಯ ಶೂಶ್ರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ರೈಮೆನ್ ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ನಿಷ್ಠೆ ಮತ್ತು ಶ್ರದ್ಧೆಯಿಂದ ಶುಶ್ರೂಷೆ ಮಾಡಿ ಅವರನ್ನು ಸಾವಿನ ದವಡೆಯಿಂದ ರಕ್ಷಿಸಿದ ಪ್ಲೋರೆನ್ಸ್ ನೈಟಿಂಗಲ್ ನರ್ಸಿಂಗ್ ಸೇವೆ ಚರಿತ್ರೆಯಲ್ಲಿ ಅಜರಾಮರಾಗಿ ಉಳಿದಿದ್ದಾರೆ ಎಂದರು.
ಆರೋಗ್ಯ ಸೇವೆಗಳ ವ್ಯವಸ್ಥೆ ಇಂದು ವಿಸ್ತಾರವಾಗಿ ಬೆಳೆಯುತ್ತಿದ್ದು ನರ್ಸಿಂಗ್ ಶಿಕ್ಷಣ ಪಡೆದವರಿಗೆ ಅಸಂಖ್ಯಾತ ಉದ್ಯೋಗವಕಾಶಗಳಿವೆ. ಪ್ರಸ್ತುತ ಉದ್ಯೋಗಗಳ ಸ್ವರೂಪಗಳಿನುಗುಣವಾಗಿ ವಿದ್ಯಾರ್ಥಿಗಳು ನರ್ಸಿಂಗ್ ವಿಷಯಗಳಲ್ಲಿ ಆಳವಾದ ಜ್ಞಾನ, ಕೌಶಲ ಮತ್ತು ಅನುಭವಗಳನ್ನು ನಿರಂತರ ಅಧ್ಯಯನದ ಮೂಲಕ ಪಡೆದುಕೊಳ್ಳಲು ಕರೆ ನೀಡಿದರು.
ವೈದ್ಯೆ ಡಾ ಸುಮನ್ ಎಸ್.ಗಡ್ಡಿ ಮಾತನಾಡಿ, ಶೂಶ್ರುಕರು ಸಾಮಾಜಿಕ ಪರಿವರ್ತನೆಯ ಪ್ರತಿನಿಧಿಗಳಾಗಿದ್ದಾರೆ. ಆರೋಗ್ಯ ಸೇವೆಗಳನ್ನು ಸಮುದಾಯದ ಮಟ್ಟದಲ್ಲಿ ಸಮಾನವಾಗಿ ವಿತರಿಸುವಲ್ಲಿ ಶೂಶ್ರುಕರ ಪಾತ್ರ ಶ್ಲಾಘನೀಯವಾದುದು. ಕುಗ್ರಾಮಗಳಿಗೂ ಕಾಲ್ನಡಿಗೆಯಿಂದ ಹೋಗಿ ಅನಕ್ಷರಸ್ಥರಲ್ಲಿ ಆರೋಗ್ಯ ನೈರ್ಮಲ್ಯ, ಶುಚಿತ್ಸ ಮತ್ತು ಪೌಷ್ಟಿಕಾಂಶಗಳ ಸೇವನೆಯ ಮಹತ್ವದ ಬಗ್ಗೆ ಅರಿವು ಮೂಡಿಸಿ ರೋಗಗಳ ಜನನ ಮತ್ತು ಪಸರೂಸುವಿಕೆ ತಡೆಯುವಲ್ಲಿ ಅವರು ಮುಂಚೂಣಿಯಲ್ಲಿದ್ದು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.