ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಚ್.ಮರಿಯೋಜಿರಾವ್ ಸಂಡೂರಿನಲ್ಲಿ ಕಲಾವಿದ ಡಾ.ವಿ.ಟಿ.ಕಾಳೆ ಅವರನ್ನು ಸನ್ಮಾನಿಸಿದರು. ಕಾಶಿಬಾಯಿ ವಿ.ಕಾಳೆ, ಚಿತ್ರಕಲಾವಿದರಾದ ಕಾಶಿನಾಥ ವಿ.ಕಾಳೆ, ಶ್ರೀನಾಥ ವಿ.ಕಾಳೆ, ಕಾರ್ತಿಕ್ ವಿ.ಕಾಳೆ, ಮರಾಠ ಸಮುದಾಯದ ಎಚ್.ಎನ್.ಭೋಸ್ಲೆ ಇದ್ದರು.  
ಬಳ್ಳಾರಿ

ಕುಲಶಾಸ್ತ್ರೀಯ ಅಧ್ಯಯನಕ್ಕೆ ಕ್ರಮ

ಶ್ರೀನಾಥ
ಕುಲಶಾಸ್ತ್ರೀಯ ಅಧ್ಯಯನಕ್ಕೆ ಕ್ರಮ

ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಚ್.ಮರಿಯೋಜಿರಾವ್ ಹೇಳಿಕೆ

ಸಂಡೂರು: ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವ ಮರಾಠ ಸಮುದಾಯದ ಸ್ಥಿತಿಗತಿ ಕುರಿತು ಕುಲಶಾಸ್ತ್ರೀಯ ಅಧ್ಯಯನ ಮಾಡಲು ಸರ್ಕಾರದದ ಗಮನ ಸೆಳೆಯಲಾಗುವುದು ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಚ್.ಮರಿಯೋಜಿರಾವ್ ಹೇಳಿದರು.
ಪಟ್ಟಣದಲ್ಲಿ ಕಲಾವಿದ ಡಾ.ವಿ.ಟಿ.ಕಾಳೆ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದರು. ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷನಾದ ಬಳಿಕ ಸಮುದಾಯದ ಸಾಧಕರ ಮನೆಗಳಿಗೆ ಭೇಟಿ ನೀಡಿ ಅಹವಾಲು ಕೇಳುತ್ತಿದ್ದೇನೆ. ರಾಜ್ಯದಲ್ಲಿ ಮರಾಠ ಸಮುದಾಯದ 65 ಲಕ್ಷ ಜನರಿದ್ದು, ಸರ್ಕಾರದ ಸೌಲಭ್ಯ ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದರು.
ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ಮರಾಠ ಸಮುದಾಯವನ್ನು 2ಎಗೆ ಸೇರಿಸಲು ಪ್ರಯತ್ನಿಸುವೆ. ಮರಾಠ ನಿಗಮದ ವ್ಯಾಪ್ತಿಗೆ ಕ್ಷತ್ರಿಯ ಮರಾಠ, ಅರೆ ಕ್ಷತ್ರಿಯ, ಆರ್ಯ ಮರಾಠ, ಆರ್ಯ ಕೊಂಕಣ ಮರಾಠ, ಕೃಷಿಯ ಮರಾಠ ಮತ್ತು ಕುಳವಾಡಿ ಜಾತಿಗಳು ಬರಲಿದ್ದು, ಇವರಿಗೆ ಸೌಲಭ್ಯ ಕಲ್ಪಿಸಲಾಗುವುದು. ಮರಾಠ ಸಮುದಾಯದ ಅಭಿವೃದ್ಧಿಗೆ ಜಲಭಾಗ್ಯ ಯೋಜನೆ (ಗಂಗಾ ಕಲ್ಯಾಣ), ಶಹಜೀರಾಜೇ ಸಮೃದ್ಧಿ ಸ್ವಯಂ ಉದ್ಯೋಗ, ಅರಿವು ಶೈಕ್ಷಣಿಕ ಸಾಲ ಯೋಜನೆ, ರಾಜಶ್ರೀ ಶಾಹುಮಹಾರಾಜ ವಿದೇಶಿ ಸಾಲ, ಮರಾಠ ಮಿಲ್ಟ್ರಿ ಹೋಟೆಲ್ ಸ್ಥಾಪನೆಗೆ ನೆರವು, ಸ್ವಯಂ ಉದ್ಯೋಗ ಸಾಲ ಯೋಜನೆ, ಹೊಲಿಗೆ ಯಂತ್ರ ವಿತರಣೆ ಯೋಜನೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.