ಆಂಧ್ರದ ಫ್ಯಾಕ್ಟರಿಗೆ ಸಾಗಿಸುತ್ತಿದ್ದ ಶ್ರೀಗಂಧ ವಶ 
ಬಳ್ಳಾರಿ

ಆಂಧ್ರದ ಫ್ಯಾಕ್ಟರಿಗೆ ಸಾಗಿಸುತ್ತಿದ್ದ ಶ್ರೀಗಂಧ ವಶ

ಪ್ರಮುಖ ಮುಖ್ಯಾಂಶಗಳು

  • ಬಂಧನ
ಬಳ್ಳಾರಿ : ನೆರೆಯ ಆಂಧ್ರ ಫ್ಯಾಕ್ಟರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 110 ಕೆ.ಜಿ. ತೂಕದ ಶ್ರೀಗಂಧ ತುಂಡುಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ.
ಆಂಧ್ರದ ಮೂಲದ ಲೋಕೇಶ್ ನಾಯ್ಕ, ಕಿರಣ್ ಕುಮಾರ್ ಬಂಧಿತರು. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಆಂಧ್ರದಲ್ಲಿನ ನಿಷತ್ ಫ್ಯಾಕ್ಟರಿಯಲ್ಲಿ ದಾಸ್ತಾನು ಇಟ್ಟಿದ್ದ 179 ಕೆ.ಜಿ. ಶ್ರೀಗಂಧ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಆರೋಪಿಗಳಿಂದ 289 ಕೆ.ಜಿ.ಶ್ರೀಗಂಧ ಜಪ್ತಿ ಮಾಡಿಕೊಂಡು ಅರಣ್ಯ ಇಲಾಖೆಯಲ್ಲಿ ಆರೋಪಿಗಳ ವಿರುದ್ಧ ಏಳು ಪ್ರಕರಣ ದಾಖಲಿಸಲಾಗಿದೆ. ಸಂಡೂರು ಉತ್ತರ ಹಾಗೂ ದಕ್ಷಿಣ ವಲಯದ ಅರಣ್ಯ ಅಧಿಕಾರಿಗಳ ಜಂಟಿ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.