ಉದಯರವಿ 
ಬಳ್ಳಾರಿ

ಗ್ರಾಮೀಣ ಠಾಣಾ ಸಿಪಿಐ ಅಮಾನತು

ಪ್ರಮುಖ ಮುಖ್ಯಾಂಶಗಳು

  • ಹಣ ಪಡೆದು ಕುಮ್ಮಕ್ಕು ನೀಡಿದ ಆರೋಪ
  • ಕಬ್ಬಿಣದ ಅದಿರು ಅಕ್ರಮ ದಾಸ್ತಾನಿಗೆ ನೆರವಾಗಿದ್ದು
ಬಳ್ಳಾರಿ : ಕಬ್ಬಿಣದ ಅದಿರು ಅಕ್ರಮ ದಾಸ್ತಾನಿಗೆ ನೆರವಾಗಿದ್ದು, ಕೆರೆಯ ಮಣ್ಣು ಸಾಗಿಸಲು ದಂಧೆಕೋರರಿಂದ ಲಂಚ ವಸೂಲಿ ಮಾಡಿದ ಆರೋಪದಡಿ ಬಳ್ಳಾರಿ ಗ್ರಾಮೀಣ ಠಾಣೆ ಸಿಪಿಐ ಉದಯ ರವಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ತಾಲೂಕಿನ ಹಲಕುಂದಿ ಗ್ರಾಮದ ಬಳಿ ನಡೆದಿದ್ದ ಅಕ್ರಮ ಅದಿರು ದಾಸ್ತಾನು ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಮುಚ್ಚಿಡಲು ಉದಯರವಿ ಪ್ರಯತ್ನಿಸಿದ್ದರು ಎನ್ನಲಾಗಿದೆ. ಕೊಳಗಲ್ ಗ್ರಾಮದ ಕೆರೆಯ ಮಣ್ಣನ್ನು ಇಟ್ಟಂಗಿ ಭಟ್ಟಿಗಳಿಗೆ ಅಕ್ರಮವಾಗಿ ಸಾಗಿಸಲು ಟ್ರಾೃಕ್ಟರ್ ಮಾಲೀಕರಿಂದ ಹಣ ಪಡೆದು ಕುಮ್ಮಕ್ಕು ನೀಡಿದ ಆರೋಪಗಳ ಸಿಪಿಐ ಮೇಲಿವೆ.
ಅಕ್ರಮ ಕುರಿತ ಸಾಕ್ಷಾೃಧಾರಗಳು ಸಿಕ್ಕ ಹಿನ್ನೆಲೆಯಲ್ಲಿ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಳ್ಳಾರಿ ವಲಯ ಐಜಿಪಿ ಜೂ.6ರಂದು ಹೊರಡಿಸಿದ್ದ ಅಮಾನತು ಆದೇಶವನ್ನು ಅಂಗೀಕರಿಸಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಅರಕ್ಷಕ ಮಹಾನಿರೀಕ್ಷಕರು (ಡಿಜಿ ಮತ್ತು ಐಜಿಪಿ) ಆಗಿರುವ ಡಾ.ಎಂ.ಎ.ಸಲೀಂ ಜೂ.7ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ.