ಹೂವಿನಹಡಗಲಿ ತಾಲೂಕಿನ ಮಾಗಳ ಸಮೀಪದ ತುಂಗಭದ್ರಾ ನದಿಯಲ್ಲಿ ಸೋಮವಾರ ನಾಡದೋಣಿ ಸಂಚರಿಸುತ್ತಿರುವುದು.  
ಬಳ್ಳಾರಿ

ದುರಸ್ತಿ ಬಳಿಕ ಜನಸೇವೆಗೆ ಸಜ್ಜಾದ ನಾಡದೋಣಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಮೂರು ಜಿಲ್ಲೆಗಳ ಜಲಮಾರ್ಗ ಪುನಾರಂಭ
  • ಗದಗ, ವಿಜಯನಗರ, ಹಾವೇರಿ ಜನರಿಗೆ ಅನುಕೂಲ

ಹೂವಿನಹಡಗಲಿ:

ತಾಲೂಕಿನ ಮಾಗಳ ಹಾಗೂ ಮುಂಡರಗಿ ವಿಠಲಾಪುರ ನಡುವೆ ಹರಿಯುವ ತುಂಗಭದ್ರಾ ನದಿಯಲ್ಲಿ ಸಂಚರಿಸುತ್ತಿದ್ದ ನಾಡದೋಣಿ ಏಳು ತಿಂಗಳ ಬಳಿಕ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ.

ಏಳು ತಿಂಗಳ ಹಿಂದೆ ನಾಡದೋಣಿಗೆ ರಧ್ರಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಗದಗ, ವಿಜಯನಗರ ಹಾಗೂ ಹಾವೇರಿ ಜಿಲ್ಲೆಗಳ ಜನರಿಗೆ ಜಲಮಾರ್ಗ ಸಂಚಾರ ಬಂದ್ ಆಗಿತ್ತು. ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ 2026ರ ಜು.22ರಂದು ಮಿನಿ ಎಲ್‌ಸಿಟಿ 6 ತಿಂಗಳಿಂದ ಬಂದ್ ಮತ್ತು 2026ರ ಜ.23ರಂದು ‘ನಾಡದೋಣಿಗೆ ರಂಧ್ರ ಪ್ರಯಾಣಕ್ಕೆ ಅರ್ಧ ಚಂದ್ರ’ ಶೀರ್ಷಿಕೆಯಡಿ ನಿರಂತರ ವಿಶೇಷ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.
ಇದರಿಂದ ಎಚ್ಚೆತ್ತ ಬಂದರು ಮತ್ತು ಒಳನಾಡು ಜಲ ಸಾರಿಗೆ ಮಂಡಳಿ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಕರಾವಳಿ ಭಾಗಕ್ಕೆ ನಾಡದೋಣಿ ಕಳುಹಿಸಿ ದುರಸ್ತಿ ಕಾರ್ಯ ಮುಗಿದ ಬಳಿಕ ಸೋಮವಾರ ತುಂಗಭದ್ರಾ ನದಿಗೆ ಇಳಿಸಿದ್ದಾರೆ. ಈ ಜಲಮಾರ್ಗ ಪುನಾರಂಭದಿಂದ ಮೂರೂ ಜಿಲ್ಲೆಗಳ ಜನರು ನಿರಾಳರಾಗಿದ್ದಾರೆ.