ಬಳ್ಳಾರಿಯ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ, ನ್ಯಾಯಾಧೀಶರಾದ ಬಿ.ಜಿ.ಪ್ರಮೋದ, ರಾಘವೇಂದ್ರ ಗೌಡ ಬಿ.ಜಿ., ಡಾ.ಪಿ.ಕುಮಾರಸ್ವಾಮಿ, ವಾಸುದೇವ ರಾಧಕಾಂತ್ ಗುಡಿ, ವೆಂಕಟೇಶ್, ರಾಜೇಶ್ ಎನ್.ಹೊಸಮನೆ ಇದ್ದರು. 
ಬಳ್ಳಾರಿ

ಕಾನೂನು, ಕಾಯ್ದೆ ಗೌರವಿಸಿ

ಪ್ರಮುಖ ಮುಖ್ಯಾಂಶಗಳು

  • ಸಂವಿಧಾನ
ಬಳ್ಳಾರಿ : ಸಂವಿಧಾನ ಆಶಯದಡಿ ಪ್ರತಿಯೊಂದು ಕಾಯ್ದೆ ಮತ್ತು ಕಾನೂನುಗಳು ರಚಿಸಲಾಗಿದೆ. ಹೀಗಾಗಿ ಕಾನೂನನಡಿ ನಡೆದುಕೊಳ್ಳುವುದು ಹಾಗೂ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ 77ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಾಮಾಜಿಕ ನ್ಯಾಯ, ಸಾಮಾನತೆಯ ನ್ಯಾಯ, ಭಾತೃತ್ವ ಮತ್ತು ಸ್ವಾತಂತ್ರೃ ನ್ಯಾಯವನ್ನು ಪ್ರಜೆಗಳಿಗೆ ಕಲ್ಪಿಸಿದೆ. ಸಂವಿಧಾನ ರಚನೆಗೆ ಕಾರಣೀಭೂತರಾದ ಮಹನೀಯರನ್ನು ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಲೇಬೇಕು. ಸಂವಿಧಾನದ ಮೂಲಭೂತ ಹಕ್ಕುಗಳಿಂದ ದೇಶದ ನಾಯಕನನ್ನು ಆಯ್ಕೆ ಮಾಡುವ ಅವಕಾಶ ನೀಡಿದೆ. ಅದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಆಗಿದೆ. ಪ್ರತಿಯೊಬ್ಬರು ಗೌರವದಿಂದ ಜೀವಿಸುವ ಹಕ್ಕು ಹೊಂದಿದ್ದು, ಎಲ್ಲರೂ ಪರಸ್ಪರ ಗೌರವದಿಂದ ಕಾಣಬೇಕು ಎಂದರು.
ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ವರ್ಗ ಎಲ್ಲರೂ ಒಡಗೂಡು ನೊಂದವರಿಗೆ ಸಕಾಲದಲ್ಲಿ ನ್ಯಾಯ ದೊರಕಿಸಿಕೊಡುವ ಕರ್ತವ್ಯ ನಮ್ಮ ಮೇಲಿದೆ. ಬಡವರ, ನೊಂದವರ, ಅಸಹಾಯಕರಿಗೆ ಕಾನೂನು ನೆರವಿನಡಿ ಸಹಾಯ ಮಾಡುವ ಧರ್ಮ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.