ಸಂಡೂರು ತಾಲೂಕು ತೋರಣಗಲ್ ಗ್ರಾಮದ ಒಂದನೇ ವಾರ್ಡ್ ಜನತಾ ಕಾಲನಿ ಆಸ್ಪತ್ರೆಯಲ್ಲಿರುವ ಕುಡಿಯುವ ನೀರಿನ ಘಟಕದ ದುರಸ್ತಿಗೆ ಆಗ್ರಹಿಸಿ ಸಿಪಿಎಂ(ಎಂ) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಸಂಡೂರು: ತೋರಣಗಲ್ ಒಂದನೇ ವಾರ್ಡ್ ಜನತಾ ಕಾಲನಿ ಆಸ್ಪತ್ರೆಯಲ್ಲಿರುವ ಕುಡಿಯುವ ನೀರಿನ ನೀರಿನ ಘಟಕ ಕೆಟ್ಟು 15ರಿಂದ 20ದಿನಗಳಾದರೂ ದುರಸ್ತಿ ಮಾಡಿಸಿಲ್ಲ. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಸಿಪಿಐ(ಎಂ) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಸಿಪಿಐ (ಎಂ) ತಾಲೂಕು ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ಶುದ್ಧ ಕುಡಿವ ನೀರಿನ ಘಟಕ ನಾಲ್ಕು ತಿಂಗಳ ಹಿಂದೆ ಕೆಟ್ಟು ಹೋಗಿತ್ತು. ಜ.26ರಂದು ಸ್ಥಳೀಯರು ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರು. ಮೋಟರ್ ಕೆಟ್ಟಿದೆ ಎಂದು ದುರಸ್ತಿ ಮಾಡಿಸಿ ಬಿಲ್ ಎತ್ತಲಾಗಿದೆ.
ಈಗ ಫಿಲ್ಟರ್ ಯಂತ್ರ ಕೆಟ್ಟಿದ್ದು, ಸಾರ್ವಜನಿಕರು ಕೊಳಾಯಿ ನೀರನ್ನು ಅವಲಂಬಿಸಿದ್ದಾರೆ. ಕೊಳಯಿ ನೀರು ವಾಸನೆಯಿಂದ ಕೂಡಿದ್ದು, ಸಾರ್ವಜನಿಕರಿಗೆ ತೊಂದರೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಶುದ್ಧ ಕುಡಿವ ನೀರಿನ ಘಟಕವನ್ನು ಸರಿಪಡಿಸಬೇಕು. ಈ ಮೊದಲಿದ್ದ ಪಿಡಿಒ ಪ್ರಾಣೇಶ ವಿರುದ್ಧ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಪಂಚಾಯಿತಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.