ರಾರಾವಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಜಿರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಸುಧೀರ್ ಹಂಗಳೂರ್ ಎರಡು ಲಕ್ಷ ರೂ. ಮೊತ್ತದ ಡಿಡಿಯನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಪೂಜಾರಿ ಹಗರೆಪ್ಪಗೆ ವಿತರಿಸಿದರು.  
ಬಳ್ಳಾರಿ

ಶ್ರದ್ಧೆ-ಭಕ್ತಿ ಹೆಚ್ಚಿಸಲು ದೇವಸ್ಥಾನಗಳ ಜೀರ್ಣೋದ್ಧಾರ

ಅಶೋಕ್ ಕುಮಾರ್ ಎನ್
ಸಿರಗುಪ್ಪ: ಸರ್ವಧರ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ ಅಪಾರ ಎಂದು ತಾಲೂಕು ಕ್ಷೇತ್ರ ಯೋಜನಾಧಿಕಾರಿ ಸುಧೀರ್ ಹಂಗಳೂರ್ ಹೇಳಿದರು.
ರಾರಾವಿ ಗ್ರಾಮದ 3ನೇ ವಾರ್ಡಿನ ಬೀರಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಎರಡು ಲಕ್ಷ ರೂ. ಮೊತ್ತದ ಡಿಡಿಯನ್ನು ಬೀರಲಿಂಗೇಶ್ವರ ದೇವಸ್ಥಾನದ ಸಮಿತಿಗೆ ನೀಡಿ ಮಾತನಾಡಿದರು. ಧಾರ್ಮಿಕ ಕೇಂದ್ರಗಳಲ್ಲಿ ಶ್ರದ್ಧೆ, ಭಕ್ತಿ, ಆಧ್ಯಾತ್ಮಿಕತೆ ಹೆಚ್ಚಿಸಲು ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯ ಹಸ್ತ ಚಾಚುತ್ತಿದೆ. ರಾಜ್ಯಾದ್ಯಾಂತ ಸಾವಿರಾರು ದೇವಸ್ಥಾನ, ಮಸೀದಿ, ಚರ್ಚ್‌ಗಳ ಜೀರ್ಣೋದ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಸಿರಗುಪ್ಪ ತಾಲೂಕಿನಲ್ಲಿ 362 ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಸ್ವಚ್ಛತೆ ಮಾಡುವುದರೊಂದಿಗೆ ಕಸ ವಿಲೇವಾರಿಗೆ ಪರಿಕರಗಳನ್ನು ವಿತರಿಸಲಾಗಿದೆ. ಎಲ್ಲ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳಲು ಶ್ರಮಿಸಲಾಗುತ್ತಿದೆ. ಜಾತಿ, ಧರ್ಮಗಳ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದೆ. ಸಾಮಾಜಿಕ ಕಳಕಳಿ ಕೆಲಸಗಳು ಸದಾಕಾಲ ನಡೆಯುತ್ತವೆ ಎಂದು ಹೇಳಿದರು.
ಬೀರಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಪೂಜಾರಿ ಹಗರೆಪ್ಪ, ಉಪಾಧ್ಯಕ್ಷ ಪೂಜಾರಿ ಯಲ್ಲಪ್ಪ, ಖಜಾಂಚಿ ಪೂಜಾರಿ ಮಂಜುನಾಥ, ಗೋಪಾಲ, ಸದಸ್ಯರಾದ ಪೂಜಾರಿ ಯಲ್ಲಪ್ಪ, ದೊಡ್ಡ ಯಲ್ಲಪ್ಪ, ದೊಡ್ಡ ಬೀರಪ್ಪ, ಪುಟ್ಟಪ್ಪ, ನಾಗಪ್ಪ, ಪಂಪಾಪತಿ, ಬಸವರಾಜ, ಪ್ರಮುಖರಾದ ಕೆ.ಚಂದ್ರಶೇಖರ, ವೀರಭದ್ರಗೌಡ ದೇವಲಾಪುರ, ಚಿದಾನಂದಪ್ಪ, ಬೆನಕರಾಜ ಡಿ.ಎಸ್., ಪ್ರಸಾದ್ ಡಿ., ಮುದುಕಪ್ಪ, ಮೇಲ್ವಿಚಾರಕ ಬೀರಪ್ಪ, ಸೇವಾಪ್ರತಿನಿಧಿ ವಾಣಿ, ಅಜೇಯ್ ಇದ್ದರು.