ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಆರ್.ಕವಿತಾಗೆ ಹಿಂದೂ ಜನಜಾಗೃತಿ ಸಮಿತಿ ತಾಲೂಕು ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸಂಚಾಲಕಿ ಪೂಜಾ, ಬಸವರಾಜ ಅಕ್ಕಿ, ಮಲ್ಲಣ್ಣ, ಅಂಗಡಿ ಮಂಜುನಾಥ ಇತರರಿದ್ದರು.
- ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
- ಹಿಂದೂ ಜನಜಾಗೃತಿ ಸಮಿತಿ ಖಂಡನೆ
ಹಗರಿಬೊಮ್ಮನಹಳ್ಳಿ: ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಹಿಂದೂ ವಿದ್ಯಾರ್ಥಿಗಳ ಜನಿವಾರ ಬಲವಂತವಾಗಿ ತೆಗೆಯಿಸುವುದು, ವಿವಾಹಿತ ಹಿಂದೂ ಮಹಿಳೆಯರ ಮಂಗಳಸೂತ್ರ, ಕಾಲುಂಗುರ, ಮೂಗುತಿ, ಕಿವಿಯೋಲೆ, ಕೈದಾರ ಮುಂತಾದ ಧಾರ್ಮಿಕ ಧಾರಣೆ ಸೂಚಕಗಳನ್ನು ತೆಗೆಯಲು ಒತ್ತಾಯಿಸುವುದಕ್ಕೆ ಹಿಂದೂ ಜನಜಾಗೃತಿ ಸಮಿತಿ ಖಂಡಿಸಿ, ತಹಸೀಲ್ದಾರ್ ಆರ್.ಕವಿತಾಗೆ ಮನವಿ ಸಲ್ಲಿಸಿತು.
ಸಮಿತಿ ಸಂಚಾಲಕಿ ಪೂಜಾ ಮಾತನಾಡಿ, ಬೆಂಗಳೂರಿನ ಮಡಿವಾಳ ಖಾಸಗಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ತಪಾಸಣೆ ನೆಪದಲ್ಲಿ ಧಾರ್ಮಿಕ ಆಚರಣೆ ಧಾರಣೆ ತೆಗೆಸಿರುವುದು ಕಾನೂನು ಬಾಹಿರವಾಗಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಸಮಿತಿ ಪ್ರಮುಖ ಬಸವರಾಜ ಅಕ್ಕಿ ಮಾತನಾಡಿ, ಶಿಕ್ಷಣ ಜಾಗೃತಿ ಹೆಸರಿನಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ಅವಮಾನಿಸುವುದು ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧವಾಗಿದೆ ಎಂದರು.
ಸಮಿತಿಯ ಮಲ್ಲಣ್ಣ, ಅಂಗಡಿ ಮಂಜುನಾಥ, ಚಂದ್ರಮೌಳಿ, ಶಿವಪುತ್ರಪ್ಪ, ರಾಮಣ್ಣ, ಸರ್ದಾರ ಯಮನಪ್ಪ, ಶಿವಮೂರ್ತಿ, ಪ್ರಮೋದ ಮೇಘರಾಜ, ಹಿರಾಳ್ ಶರಣಪ್ಪ, ಬಾಣದ ಶಿವಪ್ಪ, ಪ್ರಕಾಶ, ಗೋವಿಂದ ನಾಯ್ಕ, ಶಿವಪುತ್ರ ಇತರರಿದ್ದರು.