ಕಂಪ್ಲಿಯಲ್ಲಿ ನಿಮಿಷಾಂಬದೇವಿ ಜಯಂತ್ಯುತ್ಸವದ ಧರ್ಮಸಭೆಯಲ್ಲಿ ಶ್ರೀ ಮನ್ನಾರಾಯಣಾಶ್ರಮದ ಶ್ರೀ ಪರಮಹಂಸ ನಾರಾಯಣ ವಿದ್ಯಾಭಾರತಿ ಸ್ವಾಮೀಜಿ ಮಾತನಾಡಿದರು.  
ಬಳ್ಳಾರಿ

ಸಿದ್ಧಾಂತಗಳ ಆಚರಣೆಯಿಂದ ಧರ್ಮದ ಪೋಷಣೆ ಸಾಧ್ಯ

ಕಂಪ್ಲಿ: ಸನಾತನ ಧರ್ಮ ರಕ್ಷಿಸುವಲ್ಲಿ ಯುವಜನತೆ ಟೊಂಕಕಟ್ಟಿ ಶ್ರಮಿಸಬೇಕಿದೆ ಎಂದು ಶ್ರೀಮನ್ನಾರಾಯಣಾಶ್ರಮದ ಶ್ರೀ ಪರಮಹಂಸ ನಾರಾಯಣ ವಿದ್ಯಾಭಾರತಿ ಸ್ವಾಮೀಜಿ ಹೇಳಿದರು.
ಪಟ್ಟಣದ ಸೋಮವಂಶ ಆರ್ಯಕ್ಷತ್ರಿಯ (ಚಿತ್ರಗಾರ)ಸಮಾಜದಿಂದ ನಿಮಿಷಾಂಬದೇವಿಯ 40ನೇ ಜಯಂತ್ಯುತ್ಸವ ಧರ್ಮಸಭೆಯಲ್ಲಿ ಭಾನುವಾರ ಮಾತನಾಡಿದರು. ಆದಿಗುರು ಶಂಕರಾಚಾರ್ಯರ ತತ್ವ, ಸಿದ್ಧಾಂತಗಳನ್ನು ನಿತ್ಯ ಜೀವನದಲ್ಲಿ ಆಚರಣೆಗೆ ತಂದಲ್ಲಿ ಮಾತ್ರ ಸನಾತನ ಧರ್ಮದ ಪೋಷಣೆ ಸಾಧ್ಯ ಎಂದರು.
ಸಮಾಜದ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮುದಾಯದವರು ಸಂಘಟಿತರಾದಲ್ಲಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯ ಎಂದರು.
ನಿಮಿಷಾಂಬದೇವಿ ಜಯಂತ್ಯುತ್ಸವ ನಿಮಿತ್ತ ಪ್ರಾಂಗಣದಲ್ಲಿ ಮಡಿತೇರು, ಹೋಮ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಮುಖರಾದ ಪ್ರಶಾಂತ್ ಚಿತ್ರಗಾರ್, ಹನುಮಂತಪ್ಪ ಚಿತ್ರಗಾರ, ಪದಾಧಿಕಾರಿಗಳಾದ ನಾಗರಾಜ ಉಬಾಳೆ, ಪರಶುರಾಮ ಬುಸಾರೆ, ಶಿವಾನಂದ ಉಬಾಳೆ, ಕೃಷ್ಣಪ್ಪ ಚಿತ್ರಗಾರ, ವರ್ತಕ ಡಿ.ಶ್ರೀಧರ ಶ್ರೇಷ್ಠಿ, ಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದ ಕಾರ್ಯದರ್ಶಿ ಡಾ.ಜಂಬುನಾಥಗೌಡ, ಚಿತ್ರಗಾರ ಸಮುದಾಯದವರಿದ್ದರು.