ಸಂಡೂರು ಪುರಸಭೆಯಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ (ಪಿ.ಎಂ ಸ್ವ-ನಿಧಿ) ಹಾಗೂ ಪ್ಲಾಸ್ಟಿಕ್ ನಿಷೇಧ ಕುರಿತ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ಮುಖ್ಯಾಧಿಕಾರಿ ಬಿ.ವಿನಯ್‌ಕುಮಾರ್ ಗೌಡ, ಸಮುದಾಯ ಸಂಘಟನಾಧಿಕಾರಿ ಪ್ರಭುರಾಜ ಹಗರಿ, ಪರಿಸರ ಇಂಜಿನಿಯರ್ ಡಿ.ಅನ್ನಪೂರ್ಣಾ ಇತರರಿದ್ದರು. 
ಬಳ್ಳಾರಿ

ಬಟ್ಟೆಚೀಲಗಳ ಬಳಕೆಯಿಂದ ಪ್ಲಾಸ್ಟಿಕ್‌ಗೆ ಕಡಿವಾಣ

ಸಂಡೂರು: ಬೀದಿಬದಿ ವ್ಯಾಪಾರಿಗಳು ಪ್ಲಾಸ್ಟಿಕ್ ಬಿಟ್ಟು ಬಟ್ಟೆ ಚೀಲಗಳನ್ನು ಬಳಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಬಿ.ವಿನಯ್‌ಕುಮಾರ್ ಗೌಡ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದ ಕೆ.ಎಸ್.ವೀರಭದ್ರಪ್ಪ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ್(ಪಿ.ಎಂ ಸ್ವ-ನಿಧಿ)ಯೋಜನೆಯ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಟ್ಟೆ ಚೀಲಗಳನ್ನು ಬಳಸುವುದರಿಂದ ಪ್ಲಾಸ್ಟಿಕ್ ವಸ್ತುಗಳಿಗೆ ಕಡಿವಾಣ ಬೀಳಲಿದೆ ಎಂದರು.
ಎಸ್‌ಬಿಐ ಮುಖ್ಯ ಶಾಖೆ ಕ್ಷೇತ್ರಾಧಿಕಾರಿ ನರೇಂದ್ರ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರಿಗೆ ಅಗತ್ಯ ಇದ್ದಲ್ಲಿ 10 ಸಾವಿರ ರೂ.ಸಾಲ ಸೌಲಭ್ಯ ನೀಡಲಾಗುವುದು. ನಿಗದಿತ ಅವಧಿಯಲ್ಲಿ ಮರುಪಾವತಿಸಿದರೆ 20 ಸಾವಿರದಿಂದ 1 ಲಕ್ಷ ರೂ. ಸಾಲ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಉಚಿತವಾಗಿ ಬಟ್ಟೆ ಬ್ಯಾಗ್, ಪೇಪರ್ ಕಪ್-ಬಾಕ್ಸ್‌ಗಳನ್ನು ವಿತರಿಸಲಾಯಿತು. ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಸುಂದರ್, ಕ್ಷೇತ್ರಾಧಿಕಾರಿಗಳಾದ ನರೇಂದ್ರ, ಮಧುಸೂದನ, ಅವಿನಾಶ್, ಹರಿತಾ, ಫಿರ್ದೋಶ್ ಇತರರಿದ್ದರು.