ಕಂಪ್ಲಿಯಲ್ಲಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದೆ ಪಿ.ಹರ್ಷಿತಾಗೆ ಸಮಿತಿ ಅಧ್ಯಕ್ಷ ಯು.ರಾಮದಾಸ್ ಬಹುಮಾನ ವಿತರಿಸಿದರು. ಪದಾಧಿಕಾರಿಗಳಾದ ಶಿವರಾಮಪ್ಪ, ಕೆ.ಎಂ.ಚನ್ನಬಸವಯ್ಯ, ಚೀಟಿ ರಾಘವೇಂದ್ರ ಇದ್ದರು. 
ಬಳ್ಳಾರಿ

ರಂಗೋಲಿ ಹಿಂದೂಗಳ ಸಾಂಪ್ರದಾಯಿಕ ಕಲೆ

ಪ್ರಮುಖ ಮುಖ್ಯಾಂಶಗಳು

  • ಸ್ಪರ್ಧೆ
  • ಮಕರ ಸಂಕ್ರಮಣ

ರಂಗೋಲಿ ಹಿಂದೂಗಳ ಸಾಂಪ್ರದಾಯಿಕ ಕಲೆ

ಕಂಪ್ಲಿ: ರಂಗೋಲಿ ಹಿಂದೂಗಳ ಸಾಂಪ್ರದಾಯಿಕ ಕಲೆಯಾಗಿದೆ ಎಂದು ಬನ್ನಿಮಹಾಂಕಾಳಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಯು.ರಾಮದಾಸ್ ಹೇಳಿದರು.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನ ಸೇವಾ ಸಮಿತಿಯಿಂದ ಮಕರ ಸಂಕ್ರಮಣದ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮಾತನಾಡಿದರು.
ಆಧುನಿಕತೆಯ ಸೋಂಕಿಗೆ ಸಾಂಪ್ರದಾಯಕ ರಂಗೋಲಿ ಕಲೆ ಮಸುಕಾಗುತ್ತಿದೆ. ರಂಗೋಲಿ ಕಲೆಗೆ ಪ್ರೋತ್ಸಾಹಿಸಲು ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಪಿ.ಹರ್ಷಿತಾ ಪ್ರಥಮ, ಕಾವೇರಿ ಸೋಮಣ್ಣ ದ್ವಿತೀಯ, ಎಂ.ಪ್ರಿಯಾಂಕಾ ತೃತೀಯ ಸ್ಥಾನ ಗಳಿಸಿದರು. ವಿಜೇತರಿಗೆ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಸಮಿತಿ ಅಧ್ಯಕ್ಷ ಯು.ರಾಮದಾಸ್, ಪದಾಧಿಕಾರಿಗಳಾದ ಶಿವರಾಮಪ್ಪ, ಕೆ.ಎಂ.ಚನ್ನಬಸವಯ್ಯ, ಚೀಟಿ ರಾಘವೇಂದ್ರ, ವಿರೂಪಾಕ್ಷಗೌಡ್ರು, ಎ.ನಿರಂಜನ್, ಮಿಲ್ಟ್ರಿ ಮಂಜುನಾಥ, ಸುರೇಶ್ ಚಕ್ರದ್, ಎಂ.ಸುರೇಶ, ವೀರನಗೌಡ್ರು, ಶ್ರೀನಿವಾಸಪ್ಪ ಇತರರಿದ್ದರು.