ಕಂಪ್ಲಿಯಲ್ಲಿ ಮಹಾರಾಣಾ ಪ್ರತಾಪಸಿಂಹರ ಭಾವಚಿತ್ರದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಕ್ಷತ್ರಿಯ ರಜಪೂತ್ ಮಹಾಸಭಾದ ಅಧ್ಯಕ್ಷ ಆರ್. ಬಾಲಾಜಿ ಸಿಂಗ್ ಹಾಗೂ ಪ್ರಮುಖರಾದ ಇಂದ್ರಜಿತ್‌ಸಿಂಗ್, ಹೊಸಕೋಟೆ ಜಗದೀಶ, ಅನ್ನಪೂರ್ಣ ಸಿಂಗ್, ಬಾಲಾಜಿ ಸಿಂಗ್, ಪ್ರಮುಖರಾದ ಇಂದ್ರಜಿತ್‌ಸಿಂಗ್, ಬಾಲಾಜಿ ಸಿಂಗ್, ಮಾರುತಿ ಸಿಂಗ್, ಲಕ್ಷ್ಮಣ್ ಸಿಂಗ್, ಅನ್ನಪೂರ್ಣ ಸಿಂಗ್ ಮತ್ತು ಇತರರು. 
ಬಳ್ಳಾರಿ

ಪ್ರಗತಿಯಲ್ಲಿ ರಜಪೂತ್ ನಿಗಮ ರಚನೆ

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಆರ್. ಬಾಲಾಜಿ ಸಿಂಗ್ ಹೇಳಿಕೆ
  • ಕಂಪ್ಲಿಯಲ್ಲಿ ಪ್ರತಾಪಸಿಂಹ ಜಯಂತ್ಯುತ್ಸವ

ಕಂಪ್ಲಿ: ಕರ್ನಾಟಕ ಕ್ಷತ್ರಿಯ ರಜಪೂತ್ ಅಭಿವೃದ್ಧಿ ನಿಗಮ ರಚನೆಗಾಗಿ ಹೋರಾಟ ಮುನ್ನಡೆಸಲಾಗುತ್ತಿದ್ದು, ಇದು ಪ್ರಗತಿಯಲ್ಲಿದೆ ಎಂದು ಕರ್ನಾಟಕ ಕ್ಷತ್ರಿಯ ರಜಪೂತ್ ಮಹಾಸಭಾದ ಅಧ್ಯಕ್ಷ ಆರ್. ಬಾಲಾಜಿ ಸಿಂಗ್ ತಿಳಿಸಿದ್ದಾರೆ.

ರಜಪೂತ್ ಸಮಾಜ ಹಮ್ಮಿಕೊಂಡಿದ್ದ ರಾಷ್ಟ್ರಪ್ರೇಮಿ ಮಹಾರಾಣಾ ಪ್ರತಾಪಸಿಂಹ ಅವರ 486ನೇ ಜಯಂತ್ಯುತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ರಜಪೂತರು ಸಂಘಟಿತರಾಗಬೇಕು ಮತ್ತು ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲು ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ರಾಣಾ ಪ್ರತಾಪಸಿಂಹ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸಮಾಜದ ಕಾರ್ಯದರ್ಶಿ ಮಾರುತಿ ವಕೀಲ, ಉಪಾಧ್ಯಕ್ಷ ಲಕ್ಷ್ಮಣ ಸಿಂಗ್, ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ, ಕರ್ನಾಟಕ ಕ್ಷತ್ರಿಯ ರಜಪೂತ್ ಮಹಾಸಭಾದ ಮಹಿಳಾ ಅಧ್ಯಕ್ಷೆ ಅನ್ನಪೂರ್ಣ ಸಿಂಗ್, ಬಳ್ಳಾರಿ ಜಿಲ್ಲಾಧ್ಯಕ್ಷ ಬಾಲಾಜಿ ಸಿಂಗ್, ವಿವಿಧ ಪ್ರದೇಶಗಳ ರಜಪೂತ್ ಸಮಾಜದ ಅಧ್ಯಕ್ಷರಾದ ಹೊಸಪೇಟೆಯ ಶೇರ್‌ಸಿಂಗ್, ಕಾರಟಗಿಯ ಶಂಕರ್‌ಸಿಂಗ್, ಗಂಗಾವತಿಯ ಘನಶಾಮಸಿಂಗ್, ಮುದ್ದೇಬಿಹಾಳದ ಉದಯಸಿಂಗ್, ತಾವರೆಗೆರೆಯ ನಾರಾಯಣಸಿಂಗ್, ಮಸ್ಕಿಯ ಅಶೋಕಸಿಂಗ್ ಟಾಕೂರ್, ವಿಜಯಪುರದ ಭೀಮ್‌ಸಿಂಗ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.