ಸಣಾಪುರ ಹೊರವಲಯದಲ್ಲಿ ಮಳೆ ಆಗುತ್ತಿರುವುದು.  
ಬಳ್ಳಾರಿ

ಕಂಪ್ಲಿ ತಾಲೂಕಿನ ಹಲವೆಡೆ ಮಳೆ

ಕಂಪ್ಲಿ: ತಾಲೂಕಿನ ಹಲವೆಡೆ ಮಂಗಳವಾರ ಮಳೆ ಸುರಿಯಿತು.
ಕಂಪ್ಲಿ, ಸಣಾಪುರ, ಬೆಳಗೋಡ್‌ಹಾಳ್, ಅರಳಿಹಳ್ಳಿಯಲ್ಲಿ ಉತ್ತಮ ಮಳೆಯಾಗಿದ್ದು, ಇಟಗಿ, ಎಮ್ಮಿಗನೂರು ಭಾಗಗಳಲ್ಲಿ ಸಾಮಾನ್ಯ ಮಳೆ ಬಿದ್ದಿದೆ. ರೈತರು ಭತ್ತ ಬೆಳೆದಿದ್ದು ಮಳೆಯಿಂದ ಅನುಕೂಲವಾಗಿದೆ. ಆದರೆ, ಇನ್ನೂ ಕೆಲ ದಿನ ಉತ್ತಮ ಮಳೆ ಬಂದಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.