ಗಾಳಿ ಸಹಿತ ಸುರಿದ ಮಳೆ 
ಬಳ್ಳಾರಿ

ಗಾಳಿ ಸಹಿತ ಸುರಿದ ಮಳೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ವಾಹನಗಳಿಗೆ ಸಂಚಾರಕ್ಕೆ ಆಡಚಣೆ

ಬಳ್ಳಾರಿ :

ಜಿಲ್ಲಾದ್ಯಂತ ಹಠಾತ್ ವಾತಾವರಣ ಬದಲಾಗಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಗಾಳಿ ಸಹಿತ ಮಳೆ ಸುರಿಯಿತು.

ಕೆಲ ಹೊತ್ತು ಸುರಿದ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರ ಸಂಚಾರ ಅಸ್ತವ್ಯಸ್ತಗೊಂಡಿತು. ರಸ್ತೆಗಳಲ್ಲಿ ಮೇಲಲ್ಲ ನೀರು ಹರಿದ ಪರಿಣಾಮ ಕೆಲ ಕಾಲ ವಾಹನಗಳಿಗೆ ಸಂಚಾರಕ್ಕೆ ಆಡಚಣೆ ಉಂಟಾಯಿತು. ಇನ್ನೊಂದೆಡೆ, ಗ್ರಾಮೀಣ ಭಾಗದಲ್ಲೂ ಉತ್ತಮ ಮಳೆಯಾಗಿದ್ದು, ಮಳೆಯಿಲ್ಲದೆ ಕಂಗಾಲಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತು. ಮಳೆಯಿಂದಾಗಿ ಭೂಮಿ ತಂಪಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.