ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ
- ಪ್ರಕಟಣೆ
- ತರಗತಿ
- ವೈದ್ಯಾಧಿಕಾರಿ
ಬಳ್ಳಾರಿ : ಜಿಲ್ಲೆಯ ನಾನಾ ಕಡೆ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ಬೀಗ ಹಾಕಿರುವುದಾಗಿ ಡಿಎಚ್‌ಒ ಡಾ.ರಮೇಶಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿನ ಮುಲ್ಲಂಗಿ ಸಂಜೀವಪ್ಪ ಬೀದಿ, ಕೊಲ್ಮಿಚೌಕ್ ಹತ್ತಿರ ಬಿಸ್ವಾಸ್ ಎಂಬ ನಡೆಸುತ್ತಿದ್ದ ಪೈಲ್ಸ್ ಚಿಕಿತ್ಸಾ ಕೇಂದ್ರ, ಕೇವಲ ಹತ್ತನೇ ತರಗತಿ ಓದಿದ ಎಂ.ಡಿ.ಗೌಸ್ ಎಂಬುವವ ಕುಡಿತಿನಿ ಗ್ರಾಮದಲ್ಲಿ ನಡೆಸುತ್ತಿದ್ದ ಕ್ಲಿನಿಕ್, ಬಿಎಎಂಎಸ್ ಪದವಿ ಪಡೆದು ಸಿರಿವಾರ ಗ್ರಾಮದಲ್ಲಿ ಡಾ.ಪ್ರಕಾಶ್ ಎಂಬಾತನ ನಡೆಸುತ್ತಿದ್ದ ಆಸ್ಪತ್ರೆ ಮೇಲೆ ದಾಳಿ ಮಾಡಿ ಬಂದ್ ಮಾಡಲಾಗಿದೆ. ದಾಳಿಯಲ್ಲಿ ವೈದ್ಯಾಧಿಕಾರಿಗಳಾದ ಡಾ.ಹನುಮಂತಪ್ಪ, ಕೆ.ಎಚ್.ಗೋಪಾಲ್ ಇದ್ದರು.