ಹಗರಿಬೊಮ್ಮನಹಳ್ಳಿ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಸೋಮವಾರ ಉತ್ತರಾರಾಧನೆ ಜರುಗಿತು. ಮಠದ ಟ್ರಸ್ಟ್‌ನ ಮಂಜುನಾಥ ಶೆಟ್ರು, ಪುರಸಭೆ ಮಾಜಿ ಅಧ್ಯಕ್ಷ ಎಂ.ಮರಿರಾಮಪ್ಪ ಇತರರಿದ್ದರು. 
ಬಳ್ಳಾರಿ

ರಾಯರ ಆರಾಧನಾ ಮಹೋತ್ಸವ ಸಂಪನ್ನ

ಕುರುವತ್ತಿ ಶ್ರೀಕಾಂತಪ್ಪ
ಹಗರಿಬೊಮ್ಮನಹಳ್ಳಿ: ಶ್ರೀಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಸೋಮವಾರ ಸಂಪನ್ನಗೊಂಡಿತು.
ಕಳೆದ ಮೂರು ದಿನಗಳಿಂದ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ಶ್ರಾಸ್ತ್ರೋಕ್ತವಾಗಿ ನೆರೆವೇರಿದವು. ಈ ನಿಮಿತ್ತ ಶ್ರೀಮಠದಲ್ಲಿ ಸಹಸ್ರನಾಮ, ಪಾರಾಯಣ, ಕನಕಾಭಿಷೇಕ, ವಿಶೇಷ ಪೂಜೆ, ಮಂತ್ರೋಪಠಣ, ಶ್ರೀಸ್ವಾಮಿ ಮೂರ್ತಿ ಹಾಗೂ ದೇಗುಲಕ್ಕೆ ವಿಶೇಷ ಅಲಂಕಾರ, ಭಜನೆ, ರಥೋತ್ಸವ, ಮಹಾ ಮಂಗಳಾರತಿ ಮುಂತಾದ ಪೂಜಾ ಕೈಂಕರ್ಯಗಳು ನೆರವೇರಿದವು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಮರಿರಾಮಪ್ಪ ಮಾತನಾಡಿ, ಭಕ್ತರು ಸ್ವಾಮಿಯಲ್ಲಿ ಅಚಲ ನಂಬಿಕೆ ಇಟ್ಟು ಪೂಜೆಯಲ್ಲಿ ಪಾಲ್ಗೊಂಡರೆ ಇಷ್ಟಾರ್ಥ ಸಿದ್ಧಿಸುವ ಜತೆಗೆ ಎಲ್ಲರಿಗೂ ರಾಯರ ಅನುಗ್ರಹವಾಗಲಿದೆ. ಮುಂಬರುವ ದಿನಗಳಲ್ಲಾದರೂ ರಾಯರ ಕೃಪೆಯಿಂದ ಉತ್ತಮ ಮಳೆ-ಬೆಳೆ ಆಗಲೆಂದು ಪ್ರಾರ್ಥಿಸಿದರು. ಶ್ರೀ ಮಠದ ಟ್ರಸ್ಟ್‌ನ ಮಂಜುನಾಥ ಶೆಟ್ರು, ಎಂ.ಎಂ. ಸಾವಿತ್ರಿ, ಭಾರ್ಗವಿ, ಸತ್ಯನಾರಾಯಣ ಶೆಟ್ರು, ವೀಣಾ ಭಜನಾ ಮಂಡಳಿ ಸದಸ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.