ಪಿ.ಗಾದಿಲಿಂಗನಗೌಡ  
ಬಳ್ಳಾರಿ

ರಾಘವೇಂದ್ರಗೆ ಸಚಿವ ಸ್ಥಾನ ನೀಡಲಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಸಮುದಾಯ
ಬಳ್ಳಾರಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಕುರುಬ ಸಮುದಾಯದಿಂದ ಸತತ ಮೂರನೇ ಬಾರಿಗೆ ಶಾಸಕರಾಗಿರುವ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ಸಚಿವ ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕುರುಬ ಸಂಘದ ಜಿಲ್ಲಾಧ್ಯಕ್ಷ ಪಿ.ಗಾದಿಲಿಂಗನಗೌಡ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿರುವ ಕುರುಬ ಸಮುದಾಯವೂ ಶೇ. 90ರಷ್ಟು ಕಳೆದ ಒಂದು ದಶಕದಿಂದ ಕಾಂಗ್ರೆಸ್‌ಗೆ ಬೆಂಬಲ ನೀಡಿದರೂ, ಈವರೆಗೂ ಸೂಕ್ತವಾದ ನ್ಯಾಯ ದೊರೆತಿಲ್ಲ. ಡಿಸಿಸಿ ಹಾಗೂ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಹೇರಿಲ್ಲ. ಏಕೆಂದರೆ ನಮ್ಮ ಸಮಾಜದವರೆ ಸಿಎಂಯಾಗಿದ್ದಾರೆ ಎಂಬ ಕಾರಣದಿಂದ ನೀಡುತ್ತಿಲ್ಲ.
ಈ ಹಿಂದೆ ಅಖಂಡ ಜಿಲ್ಲೆಯಿಂದ ಹೂವಿನಹಡಗಲಿ ಕ್ಷೇತ್ರಕ್ಕೆ ಈ.ಟಿ.ಅಂಬುನಾಥ ಅವರಿಗೆ ಪಕ್ಷದಿಂದ ಶಾಸಕ ಸ್ಥಾನಕ್ಕೆ ಟಿಕೆಟ್ ನೀಡಿ ಗೆದ್ದ ಬಳಿಕ ಸಚಿವ ಸ್ಥಾನ ನೀಡಿದ್ದು ಬಿಟ್ಟರೆ ಈವರೆಗೆ ಯಾರಿಗೂ ನೀಡಿಲ್ಲ. ಆದ್ದರಿಂದ, ಮುಂಬರುವ ಸಂಪುಟ ಪುನಾರಚನೆಯಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ಸಚಿವ ಸ್ಥಾನ ನೀಡಿ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ಕುರುಬ ಸಮಾಜದ ಮುಖಂಡರೊಬ್ಬರಿಗೆ ಎಂಎಲ್ಸ್‌ಸಿ ಸ್ಥಾನ ಕಲ್ಪಿಸುವುದರ ಜತೆಗೆ ಕೆಲವೊಂದು ನಿಗಮ ಮಂಡಳಿಗಳಿಗೆ ಅಧ್ಯಕ್ಷ ಸ್ಥಾನ ನೀಡಬೇಕು. ಇದಲ್ಲದೆ, ಜಿಲ್ಲೆಯ ಬುಡಾ ಅಧ್ಯಕ್ಷ ಹುದ್ದೆಯನ್ನು ಕುರುಬ ಸಮುದಾಯದವರಿಗೆ ನೀಡಬೇಕು. ಈ ಸ್ಥಾನಗಳ ನೀಡುವ ಬಗ್ಗೆ ಮುಂಬರುವ ದಿನಗಳಲ್ಲಿ ರಾಜ್ಯ ನಾಯಕರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಕುರುಬ ಸಮಾಜದ ಪ್ರಮುಖರಾದ ಬೆಣಕಲ್ ಬಸವರಾಜ್, ದಮ್ಮೂರು ಸೋಮಪ್ಪ, ಬಿ.ಕೆ.ಕೆರೆಕೋಡಪ್ಪ, ಹೊನ್ನುರಪ್ಪ, ಚನ್ನಬಸವರಾಜ್, ರಾಮಾಂಜನೇಯ, ಉಮಾಪತಿ ಇದ್ದರು.